ಕರ್ನಾಟಕ

karnataka

ETV Bharat / sitara

ಪುಸ್ತಕಗಳ ಮೇಲೆ ನಿಂತು ಫೋಟೋಶೂಟ್​​​ ಮಾಡಿಸಿಕೊಂಡ ನಟಿ: ಫುಲ್​​​​​ ಟ್ರೋಲ್​​​ - ಅಮೆರಿಕಾದ  ಹಾಡುಗಾರ್ತಿ ಸೆಲೆಮಾ ಗೊಮೆಸ್​​​​

ಅಮೆರಿಕದ  ಹಾಡುಗಾರ್ತಿ ಹಾಗೂ ನಟಿಯಾಗಿರುವ ಸೆಲೆಮಾ ಗೊಮೆಸ್​​​​ ಇತ್ತೀಚೆಗೆ ಪೂಮಾ ಕಂಪನಿಯ ಶೂ ಪ್ರಚಾರಕ್ಕೆ ಈ ರೀತಿ ಪುಸ್ತಕಗಳ ಮೇಲೆ ನಿಂತು ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸೆಲೆನಾರನ್ನು ಸರಿಯಾಗಿಯೇ ಕಾಲೆಳೆಯುತ್ತಿದ್ದಾರೆ.

Selena Gomez
ಸೆಲೆಮಾ ಗೊಮೆಸ್​​​​

By

Published : Nov 30, 2019, 6:51 PM IST

ಹಣಕ್ಕೋಸ್ಕರ, ಪ್ರಚಾರಕ್ಕೋಸ್ಕರ ಏನು ಬೇಕಾದ್ರು ಮಾಡ್ತಾರೆ ಅನ್ನೊದಕ್ಕೆ ಇಲ್ಲೊಬ್ಬ ನಟಿ ಪುಸ್ತಕಗಳ ಮೇಲೆ ನಿಂತಿರುವುದೇ ಸಾಕ್ಷಿ. ಎಲ್ಲರು ವಿದ್ಯಾ ದೇವತೆ, ಸರಸ್ವತಿ ಎಂದು ಭಾವಿಸುವ ಪುಸ್ತಕದ ಮೇಲೆ ಶೂ ಹಾಕಿಕೊಂಡು ನಿಂತು ಫೋಟೋಗೆ ಪೋಸ್​​ ಕೊಟ್ಟಿದ್ದಾರೆ ಈ ನಟಿ.

ಹೌದು, ಅಮೆರಿಕದ ಹಾಡುಗಾರ್ತಿ ಹಾಗೂ ನಟಿಯಾಗಿರುವ ಸೆಲೆಮಾ ಗೊಮೆಸ್​​​​ ಇತ್ತೀಚೆಗೆ ಪೂಮಾ ಕಂಪನಿಯ ಶೂ ಪ್ರಚಾರಕ್ಕೆ ಈ ರೀತಿ ಪುಸ್ತಕಗಳ ಮೇಲೆ ನಿಂತು ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಸೆಲೆನಾರನ್ನು ಸರಿಯಾಗಿಯೇ ಕಾಲೆಳೆಯುತ್ತಿದ್ದಾರೆ.

ಟ್ವಿಟರ್​​ನಲ್ಲಿ ಕಮೆಂಟ್​ ಮಾಡುತ್ತಿರುವ ನೆಟ್ಟಿಗರು, ಶೂ ಧರಿಸಿ ಪುಸ್ತಕದ ಮೇಲೆ ನಿಲ್ಲಬೇಡ. ನಿನ್ನ ಪರೀಕ್ಷೆಗಳಲ್ಲಿ ಫೇಲ್​ ಆಗುವೆ ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತೊಬ್ಬರು ಕಮೆಂಟ್​ ಮಾಡಿದ್ದು, ನಾನು ಈ ರೀತಿ ಪುಸ್ತಕದ ಮೇಲೆ ನಿಂತಿದ್ದರೆ ನನ್ನ ತಾಯಿ ಕಪಾಳಕ್ಕೆ ಬಾರಿಸುತ್ತಿದ್ದರು ಎಂದು ಜೋಕ್​ ಮಾಡಿದ್ದಾರೆ.

ಮತ್ತೊಬ್ಬರು ಕಮೆಂಟ್​ ಮಾಡಿದ್ದು, ನೀನು ಪುಸ್ತಕದ ಮೇಲೆ ನಿಂತಿರುವೆಯಾ.. ಸರಸ್ವತಿ ಖಂಡಿತಾ ನಿನಗೆ ಶಿಕ್ಷೆ ಕೊಡುತ್ತಾಳೆ ಎಂದು ಶಪಿಸಿದ್ದಾರೆ.

ABOUT THE AUTHOR

...view details