ಕರ್ನಾಟಕ

karnataka

ETV Bharat / sitara

'ಸೆಕ್ಷನ್ 375' ಸಿನಿಮಾ ಟ್ರೇಲರ್ ಬಿಡುಗಡೆ: ಅತ್ಯಾಚಾರಿ​ vs ಸಂತ್ರಸ್ತೆಯ ನಡುವೆ ಲೀಗಲ್​ ಫೈಟ್​ - ಭಾರತೀಯ ಸಂವಿಧಾನ

ಅಕ್ಷಯ್ ಖನ್ನಾ, ರೀಚಾಚಡ್ಡಾ, ಮೀರಾ ಛೋಪ್ರಾ ನಟಿಸಿರುವ ನೈಜ ಘಟನೆಯಿಂದ ಸ್ಫೂರ್ತಿ ಪಡೆದು ನಿರ್ಮಿಸಲಾದ 'ಸೆಕ್ಷನ್ 375' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಅಜಯ್ ಭಲ್ ನಿರ್ದೇಶನದ ಸಿನಿಮಾ ಸೆಪ್ಟೆಂಬರ್ 13 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

'ಸೆಕ್ಷನ್ 375'

By

Published : Aug 14, 2019, 8:45 PM IST

ನೈಜ ಘಟನೆ ಆಧಾರಿತ ಎಷ್ಟೋ ಸಿನಿಮಾಗಳು ತೆರೆಗೆ ಬಂದಿವೆ. ಜೊತೆಗೆ ಭಾರತೀಯ ಸಂವಿಧಾನದ ವಿಧಿಗಳಿಗೆ ಸಂಬಂಧಿಸಿದ ಸಿನಿಮಾಗಳು ಕೂಡಾ ತಯಾರಾಗುತ್ತಿವೆ. ಇದೀಗ ಅತ್ಯಾಚಾರಕ್ಕೆ ಸಂಬಂಧಪಟ್ಟ 'ಸೆಕ್ಷನ್ 375' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಅಜಯ್ ಭಲ್ ನಿರ್ದೇಶನದ 'ಸೆಕ್ಷನ್ 375' ಸಿನಿಮಾದ ಟ್ರೇಲರನ್ನು ನಿನ್ನೆ ಚಿತ್ರತಂಡ ಬಿಡುಗಡೆ ಮಾಡಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳನ್ನು ಆಸ್ಪತ್ರೆಯಲ್ಲಿ ಪ್ರಶ್ನಿಸುತ್ತಿರುವ ದೃಶ್ಯದ ಮೂಲಕ ಟ್ರೇಲರ್ ಆರಂಭವಾಗಲಿದೆ. ನಂತರ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯುವ ದೃಶ್ಯಗಳು ನಿಜಕ್ಕೂ ಈ ಸಿನಿಮಾವನ್ನು ನೋಡಲೇಬೇಕೆಂಬ ಕ್ಯೂರಿಯಾಸಿಟಿ ಹುಟ್ಟಿಸುತ್ತದೆ. ಸಿನಿಮಾ ನಿರ್ದೇಶಕನೊಬ್ಬ ಜ್ಯೂನಿಯರ್ ಕಾಸ್ಟ್ಯೂಮ್ ಅಸಿಸ್ಟೆಂಟ್​​ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಲಿದ್ದು ಅದು ಆಕೆಯ ಒಪ್ಪಿಗೆ ವಿರುದ್ಧ ನಡೆಸಲಾದ ಅತ್ಯಾಚಾರವೇ..ಅಲ್ಲವೇ ಎಂಬ ಕೋರ್ಟ್​ ದೃಶ್ಯಗಳನ್ನು ಟ್ರೇಲರ್​​ನಲ್ಲಿ ನೋಡಬಹುದು. ಭಾರತೀಯ ದಂಡಸಂಹಿತೆ 375 ರ ಪ್ರಕಾರ 'ಒಂದು ಹೆಣ್ಣಿನ ಅನುಮತಿ ಇಲ್ಲದೆ ಆಕೆಯ ದೈಹಿಕ ಸಂಬಂಧ ಬೆಳೆಸಿದ್ದಲ್ಲಿ ಅದು ಅತ್ಯಾಚಾರ ಎಂದೇ ಅರ್ಥ'. ಈ ವಿಚಾರವನ್ನು ನಿರ್ದೇಶಕ ಅಜಯ್ ಭಲ್ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ.

ವಿಶೇಷ ಎಂದರೆ ಅಕ್ಷಯ್​ ಖನ್ನಾ ಅವರು ಆರೋಪಿ ಪರವಾಗಿ ಸಿನಿಮಾದಲ್ಲಿ ವಾದ ಮಾಡಿದರೆ, ರೀಚಾ ಚಡ್ಡಾ ಅವರು ಸಂತ್ರಸ್ತೆ ಪರ ವಕೀಲಿಕೆ ಮಾಡಿದ್ದಾರೆ. ಸೆಕ್ಷನ್​ 375ನ ಸೂಕ್ಷ್ಮ ವಿಷಯಗಳಲ್ಲಿ ನಿರ್ದೇಶಕರು ಕೈಯ್ಯಾಡಿಸಿದ್ದು, ಈ ಸೆಕ್ಷನ್​ ದುರ್ಬಳಕೆಯಾಗುತ್ತಿದೆ ಎಂಬ ಚರ್ಚೆಗಳೂ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾ ತಪ್ಪು ಸಂದೇಶ ನೀಡಬಹುದೇ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೋಸ್ಟ್​ ಹಾಕಿದ್ದಾರೆ.

ಪನೋರಮಾ ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಸಿನಿಮಾವನ್ನು ಕುಮಾರ್ ಮಂಗತ್​​ ಪಠಕ್​, ಅಭಿಷೇಕ್ ಪಠಕ್​ ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್ ಖನ್ನಾ, ರೀಚಾಚಡ್ಡಾ, ಮೀರಾ ಛೋಪ್ರಾ ಹಾಗೂ ರಾಹುಲ್ ಭಟ್​​​ ಚಿತ್ರದಲ್ಲಿ ನಟಿಸಿದ್ದಾರೆ. ಮೀರಾ ಚೋಪ್ರಾ ಅತ್ಯಾಚಾರ ಬಾಧಿತೆಯಾಗಿ ನಟಿಸಿದ್ದಾರೆ. ಸೆಪ್ಟೆಂಬರ್ 13 ರಂದು ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

ABOUT THE AUTHOR

...view details