ಕರ್ನಾಟಕ

karnataka

ಬಿಗ್​ ಬಾಸ್​ ಮನೆಗೆ 2ನೇ ವೈಲ್ಡ್‌ ಕಾರ್ಡ್ಟ್‌ ಎಂಟ್ರಿ... ಯಾರೇ ನೀ ಚೆಲುವೆ?

ಕಲರ್ಸ್​​​ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಬಿಗ್​ ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎಂಬುದು ಎಲ್ಲರ ಕೂತೂಹಲ ಹೆಚ್ಚಿಸಿದೆ. ಮೂಲಗಳ ಪ್ರಕಾರ ಈಕೆ ಮೇ 1 ಸಿನಿಮಾದಲ್ಲಿ ನಟಿಸಿರುವ ರಕ್ಷಾ ಸೋಮಶೇಖರ್‌ ಎನ್ನಲಾಗಿದೆ.

By

Published : Nov 25, 2019, 4:08 PM IST

Published : Nov 25, 2019, 4:08 PM IST

Updated : Dec 24, 2019, 7:35 PM IST

ETV Bharat / sitara

ಬಿಗ್​ ಬಾಸ್​ ಮನೆಗೆ 2ನೇ ವೈಲ್ಡ್‌ ಕಾರ್ಡ್ಟ್‌ ಎಂಟ್ರಿ... ಯಾರೇ ನೀ ಚೆಲುವೆ?

ರಕ್ಷಾ ಸೋಮಶೇಖರ್

ಕುತೂಹಲದ ಗೂಡಾಗಿರುವ ಬಿಗ್​ ಬಾಸ್​ ಮನೆ ದಿನದಿಂದ ದಿನಕ್ಕೆ ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಬಿಗ್‌ಬಾಸ್​ ನೋಡುಗರಿಗೆ ಮತ್ತೊಂದು ಹೊಸ ಸುದ್ದಿ ಸಿಕ್ಕಿದೆ. ಅದೇನಂದ್ರೆ, ಬಿಗ್​​ ಬಾಸ್​​ ಮನೆಗೆ 2ನೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.

ಕಲರ್ಸ್​​​ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎಂಬುದು ಎಲ್ಲರ ಕೂತೂಹಲ ಹೆಚ್ಚಿಸಿದೆ. ಮೂಲಗಳ ಪ್ರಕಾರ ಈಕೆ ಮೇ 1 ಸಿನಿಮಾದಲ್ಲಿ ನಟಿಸಿರುವ ರಕ್ಷಾ ಸೋಮಶೇಖರ್.

ರಕ್ಷಾ ಸೋಮಶೇಖರ್

ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವವರು ಬಿಗ್ ಬಾಸ್ ಮನೆಯೊಳಗೆ ಯಾರಿಗೂ ಪರಿಚಯ ಇಲ್ಲ ಎಂಬಂತಿದೆ. ಆದರೆ, ಕಿಶನ್ ಆಕೆಯನ್ನು‌ ತಬ್ಬಿಕೊಂಡು ಮಾತಾಡಿರುವುದನ್ನು ನೋಡಿದರೆ ಈ ಮೊದಲೇ ಪರಿಚಯ ಇದೆ ಎನ್ನಲಾಗುತ್ತಿದೆ.

ರಕ್ಷಾ ಸೋಮಶೇಖರ್

ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆರ್ ಜೆ ಪೃಥ್ವಿ ಎಂಟ್ರಿ ಕೊಟ್ಟಿದ್ದು, ಮನೆಯೊಳಗೆ ಉತ್ತಮವಾಗಿ ಆಟವಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ 2ನೇ ವೈಲ್ಡ್​​ ಕಾರ್ಡ್​ ಎಂಟ್ರಿ ಕೊಟ್ಟಿದ್ದು ಬಿಗ್​ ಬಾಸ್​​ ಮನೆ ಇನ್ನುಮುಂದೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

ರಕ್ಷಾ ಸೋಮಶೇಖರ್
Last Updated : Dec 24, 2019, 7:35 PM IST

ABOUT THE AUTHOR

...view details