ಸ್ಟಾರ್ ಈಸ್ ಬ್ಯಾಕ್ ಅಂತಾ ಕ್ಯಾಚೀ ಡೈಲಾಗ್ ಹೊಂದಿರುವ ಐ ಲವ್ ಯೂ ಸಿನಿಮಾ ರಿಯಲ್ ಸ್ಟಾರ್ 'ಎ', ಪ್ರೀತ್ಸೆ, ಉಪೇಂದ್ರ ಸಿನಿಮಾಗಳನ್ನ ನೆನಪಿಸುತ್ತೆ.
ಎ ಮತ್ತು ಉಪೇಂದ್ರ ಚಿತ್ರಗಳ ಗುಂಗು ಹಿಡಿಸುತ್ತೆ ಐ ಲವ್ ಯೂ ಸಿನಿಮಾದ 2ನೇ ಟ್ರೈಲರ್.. - undefined
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸೌಥ್ ಸಿನಿಮಾ ಇಂಡಸ್ಟ್ರಿಯಲ್ಲಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಟ್ರೈಲರ್ ಹಾಗೂ ಪೋಸ್ಟರ್ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಇದೇ ಸಿನಿಮಾದ 2ನೇ ಟ್ರೈಲರ್ ರಿವೀಲ್ ಆಗಿದೆ.
![ಎ ಮತ್ತು ಉಪೇಂದ್ರ ಚಿತ್ರಗಳ ಗುಂಗು ಹಿಡಿಸುತ್ತೆ ಐ ಲವ್ ಯೂ ಸಿನಿಮಾದ 2ನೇ ಟ್ರೈಲರ್..](https://etvbharatimages.akamaized.net/etvbharat/prod-images/768-512-3401140-thumbnail-3x2-uppi.jpg)
ಐ ಲವ್ ಯೂ ಚಿತ್ರದ ಸೆಕೆಂಡ್ ಟ್ರೈಲರ್
ಐ ಲವ್ ಯೂ ಚಿತ್ರದ ಸೆಕೆಂಡ್ ಟ್ರೈಲರ್
ರಚಿತಾ ರಾಮ್ ಫಸ್ಟ್ ಟ್ರೈಲರ್ಗಿಂತ ಹೆಚ್ಚಾಗಿ ಸೆಕೆಂಡ್ ಟ್ರೈಲರ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣ್ತಾರೆ. ಉಪ್ಪಿ ಪಂಚಿಂಗ್ ಡೈಲಾಗ್ ಮಧ್ಯೆ ಸೋನು ಗೌಡ ಪಕ್ಕಾ ಟ್ರೆಡಿಷಿನಲ್ ಅವತಾರದಲ್ಲಿ ಕಾಣಿಸಿದ್ದಾರೆ. ನಿರ್ದೇಶನದ ಜತೆಗೆ ಆರ್.ಚಂದ್ರು ಚಿತ್ರವನ್ನ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಉಪ್ಪಿ ರಚಿತಾ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್ 14 ರಂದು ರಾಜ್ಯಾದ್ಯಂತ ಐ ಲವ್ ಯೂ ಸಿನಿಮಾ ರಿಲೀಸ್ ಆಗಲಿದೆ.
Last Updated : May 28, 2019, 12:48 PM IST