ಸರಿಗಮಪ ಸೀಸನ್ 17ರಲ್ಲಿ ಭಾಗವಹಿಸಬೇಕಾ! ಈ ನಂಬರ್ಗೆ ವಾಟ್ಸ್ಆ್ಯಪ್ ಮಾಡಿ - ಜೀ ವಾಹಿನಿಯ ಸರಿಗಮಪ
ಬೆಂಗಳೂರು:ಕನ್ನಡದ ಹೆಸರಾಂತ ಹಾಡುಗಳ ರಿಯಾಲಿಟಿ ಶೋ ಮತ್ತೊಮ್ಮೆ ಆರಂಭವಾಗಲಿದೆ. ಹದಿನಾರು ಯಶಸ್ವಿ ಸೀಸನ್ ಪೂರೈಸಿರುವ ಸರಿಗಮಪ ಸೀಸನ್ 17 ಆರಂಭವಾಗಲಿದೆ.
![ಸರಿಗಮಪ ಸೀಸನ್ 17ರಲ್ಲಿ ಭಾಗವಹಿಸಬೇಕಾ! ಈ ನಂಬರ್ಗೆ ವಾಟ್ಸ್ಆ್ಯಪ್ ಮಾಡಿ](https://etvbharatimages.akamaized.net/etvbharat/prod-images/768-512-5135149-thumbnail-3x2-vis.jpg)
ಬೆಂಗಳೂರು: ನೀವು ಸಂಗೀತ ಪ್ರಿಯರೇ? ನಿಮಗೆ ಶ್ರುತಿಬದ್ಧವಾಗಿ ಸುಶ್ರಾವ್ಯವಾಗಿ ಹಾಡಲು ತಿಳಿದಿದೆಯೇ? ಮಾತ್ರವಲ್ಲ ನಿಮಗೂ ಕೂಡಾ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಎಂಬ ಮಹಾದಾಸೆ ಇದೆಯೇ? ಹಾಗಿದ್ದರೆ ಇಲ್ಲಿ ನಿಮಗೊಂದು ಸುವರ್ಣಾವಕಾಶ ಇದೆ..
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಗಳ ಸಾಲಿಗೆ ಸೇರಿರುವ ಸರಿಗಮಪ ಸೀಸನ್ 17 ಆರಂಭವಾಗಲಿದ್ದು, ಆರು ವರ್ಷದಿಂದ ಅರುವತ್ತು ವರ್ಷದ ವಯೋಮಿತಿ ಇರುವವರು ಈ ಶೋನಲ್ಲಿ ಭಾಗವಹಿಸಬಹುದು.
ಅಂದ ಹಾಗೇ ಕಾರ್ಯಕ್ರಮಕ್ಕೆ ಆಯ್ಕೆ ಆಗಬೇಕೆಂದಿದ್ದರೆ ಆಡಿಶನ್ಗೆ ಅಟೆಂಡ್ ಮಾಡುವುದು ಕಡ್ಡಾಯ. ಆದರೆ ಮೊದಲಿಗೆ ಕ್ಲಾಸಿಕಲ್, ಸೆಮಿ ಕ್ಲಾಸಿಕಲ್, ಜಾನಪದ, ಮೆಲೋಡಿ, ಫಾಸ್ಟ್ ನಂ ಇಷ್ಟು ಸಂಗೀತದ ಪ್ರಕಾರಗಳ ಪೈಕಿ ನಿಮಗಿಷ್ಟವಾಗಿರುವ ಒಂದನ್ನು ಆಯ್ಕೆ ಮಾಡಿ ಹಾಡಿರುವಂತಹ ವಿಡಿಯೋವನ್ನು 8660860069 ವಾಟ್ಸಾಪ್ ಕಳುಹಿಸಿ ನಂತರ ಭಾಗವಹಿಸಬಹುದಾಗಿದೆ.