ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ "ಹರಿಕಥೆ ಅಲ್ಲ ಗಿರಿಕಥೆ" ಸಿನಿಮಾದ ಪ್ರಿ - ಪ್ರೊಡಕ್ಷನ್ಸ್ ವರ್ಕ್ ಮುಗಿದಿದೆ. ಸದ್ಯ ಸರ್ಕಾರ ಶೂಟಿಂಗ್ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ತಕ್ಷಣವೇ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಇದೀಗ ಚಿತ್ರತಂಡ ನಾಯಕಿಗೋಸ್ಕರ ಹುಡುಕಾಟ ಪ್ರಾರಂಭಿಸಿದೆ.
ರಿಷಬ್ ಶೆಟ್ಟಿಯ ’’ಹರಿಕಥೆ ಅಲ್ಲ ಗಿರಿಕಥೆ’’ಗೆ ನಾಯಕಿಯ ಹುಡುಕಾಟ - ಚಿತ್ರತಂಡ ಆಡಿಷನ್
ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ "ಹರಿಕಥೆ ಅಲ್ಲ ಗಿರಿಕಥೆ" ಸಿನಿಮಾಗೆ ನಾಯಕಿಯ ಆಯ್ಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಆಡಿಷನ್ ಏರ್ಪಡಿಸಿದೆ.
![ರಿಷಬ್ ಶೆಟ್ಟಿಯ ’’ಹರಿಕಥೆ ಅಲ್ಲ ಗಿರಿಕಥೆ’’ಗೆ ನಾಯಕಿಯ ಹುಡುಕಾಟ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ನಾಯಕಿಯ ಹುಡುಕಾಟ](https://etvbharatimages.akamaized.net/etvbharat/prod-images/768-512-7748341-thumbnail-3x2-mng.jpg)
ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ನಾಯಕಿಯ ಹುಡುಕಾಟ
ಚಿತ್ರದಲ್ಲಿ ರಿಷಬ್ ಶೆಟ್ಟಿ ಕಾಂಬಿನೇಶನ್ಗೆ ಹೊಸ ಮುಖದ ಹುಡುಕಾಟದಲ್ಲಿರುವ ಚಿತ್ರತಂಡ, ನಾಯಕಿ ಆಯ್ಕೆ ಮಾಡುವ ಸಲುವಾಗಿ ಆಡಿಷನ್ ನಡೆಸಲು ತಿರ್ಮಾನಿಸಿದೆ. ಅಲ್ಲದೇ ಆನ್ಲೈನ್ ಮೂಲಕವೇ ಆಡಿಷನ್ ಮಾಡಲು ನಿರ್ದೇಶಕ ಗಿರಿಕೃಷ್ಣ ಪ್ಲಾನ್ ಮಾಡಿದ್ದಾರೆ.
ನಾಯಕಿ ಆಗಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿರುವ 18 ರಿಂದ 28 ವಯಸ್ಸಿನ ಹೆಣ್ಣು ಮಕ್ಕಳು ತಮ್ಮ ಒಂದು ನಿಮಿಷದ ನಟನೆಯ ವಿಡಿಯೋವನ್ನು hkgk.rsf@gmail.com ಮೇಲ್ ಐಡಿಗೆ ಕಳುಹಿಸಬೇಕು. ವಿಡಿಯೋ ಕಳುಹಿಸಿದವರಲ್ಲಿ ಉತ್ತಮ ನಟನೆ ಯಾರು ಮಾಡಿದ್ದಾರೆಯೋ ಅವರೇ ಈ ಚಿತ್ರದ ನಾಯಕಿಯಾಗಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.