ಹಾಲಿವುಡ್ನ ದಿವಂಗತ ನಟ ಸೀನ್ ಕಾನರಿ Dr.No ಸಿನಿಮಾದಲ್ಲಿ ಬಳಸಿದ್ದ ಗನ್ಗಳನ್ನು ಹರಾಜಿಗಿಡಲಾಗಿದೆಯಂತೆ.
ಹಾಲಿವುಡ್ ಮಾಹಿತಿ ಪ್ರಕಾರ, ಮುಂಬರುವ ಐಕಾನ್ಸ್ ಅಂಡ್ ಐಡಲ್ಸ್ ಟ್ರೈಲಾಜಿ ಹರಾಜು ಮಳಿಗೆಯಲ್ಲಿ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಳಸಿದ್ದ ಗನ್ಗಳನ್ನು ಮಾರಾಟಕ್ಕೆ ಇಡಲಾಗಿದೆಯಂತೆ. ಈ ಹರಾಜು ಇದೇ ಡಿಸೆಂಬರ್ 3ರಂದು ನಡೆಯಲಿದೆ.
ಅಲ್ಲಿನ ಹರಾಜು ಮಳಿಗೆ ಪ್ರಕಾರ ಈ ಗನ್ಗಳ ಬೆಲೆ 150,000ರಿಂದ 200,000 ಅಮೆರಿಕನ್ ಡಾಲರ್ ಇದೆಯಂತೆ. ಬಾಂಡ್ ಸಿರೀಸ್ ಸಿನಿಮಾಗಳಲ್ಲಿ ಸೀನ್ ಕಾನರಿ ಈ ಮೊದಲು ತಮ್ಮ ನೆಚ್ಚಿನ ಬೆರೆಟ್ಟ ಶಸ್ತ್ರಾಸ್ತ್ರ ಕಂಪನಿ ಉತ್ಪಾದಿಸುತ್ತಿದ್ದ MI6 ಪಿಸ್ತೂಲನ್ನು ಉಪಯೋಗಿಸುತ್ತಿದ್ರು.
ಈ ಗನ್ ಆಗಾಗ ಸಮಸ್ಯೆಗೆ ಬರುತ್ತಿದ್ದ ಕಾರಣ ವಾಲ್ಟೇರ್ ಪಿಪಿ ಪಿಸ್ತೂಲ್ ಬಳಸಲು ಮುಂದಾದರು. ಇದೇ ಗನ್ ಅನ್ನು ತಮ್ಮ ಬಾಂಡ್ ಸಿರೀಸ್ನಲ್ಲಿ ಬಳಸಿದ ಕಾರಣ ವಾಲ್ಟೇರ್ ಗನ್ ಮುಂದೆ ಐಕಾನಿಕ್ ಗನ್ ಆಗಿ ಗುರುತಿಸಲ್ಟಟ್ಟಿತು.