ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ . ಸುಯೋಧನನಾಗಿ ಡಿಬಾಸ್ ಅಭಿನಯಿಸಿರುವ ಕುರುಕ್ಷೇತ್ರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ್ದು, ಈ ಮೂಲಕ ಈಗಾಗ್ಲೇ ಒಂದು ದಾಖಲೆ ಕ್ರಿಯೆಟ್ ಮಾಡಿದೆ.
ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ದುರ್ಯೋಧನನ ಅಬ್ಬರ ನೋಡೋಕೆ ಈಗ್ಲೂ ಥಿಯೇಟರ್ನತ್ತ ಧಾವಿಸ್ತಿದ್ದಾರೆ. ವಿಶೇಷ ಅಂದ್ರೆ ಇದೀಗ ಶಾಲೆಗಳಿಂದಲೇ ಮಕ್ಕಳಿಗೆ ಕುರುಕ್ಷೇತ್ರದ ವೈಭವ ತೋರಿಸೋ ಕೆಲಸ ನಡೀತಿದೆ.
ಕುರುಕ್ಷೇತ್ರ ವೀಕ್ಷಣೆ ಮಾಡಿದ ಶಾಲಾ ಮಕ್ಕಳು ಫುಲ್ ಖುಶ್ ಸಿನಿಮಾ ರಿಲೀಸ್ ಆದ ಪ್ರಾರಂಭದಲ್ಲಿ ಶಾಲಾ-ಕಾಲೇಜು ಮಕ್ಕಳು ಕುರುಕ್ಷೇತ್ರ ಸಿನಿಮಾ ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರು. ಇದೀಗ ಶಾಲೆಯ ಆಡಳಿತ ಮಂಡಳಿಗಳೇ ಮಕ್ಕಳಿಗೆ ಪೌರಾಣಿಕ ಸಿನಿಮಾ ತೋರಿಸೋಕೆ ಮುಂದಾಗಿದ್ದು, ತುರುವೇಕೆರೆಯ ಖಾಸಗಿ ಶಾಲೆಯೊಂದು ಮಕ್ಕಳಿಗಾಗಿ ಕುರುಕ್ಷೇತ್ರ ಪ್ರದರ್ಶನ ಏರ್ಪಡಿಸಿತ್ತು.
ಸಿನಿಮಾ ವೀಕ್ಷಿಸಿದ ಮಕ್ಕಳು ಫುಲ್ ಖುಶ್ ಆಗಿದ್ದಾರೆ. ಅಲ್ಲದೆ ಶಾಲಾ ಮಕ್ಕಳು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.