ಕರ್ನಾಟಕ

karnataka

By

Published : Jul 31, 2019, 3:05 AM IST

ETV Bharat / sitara

'ಸವರ್ಣದೀರ್ಘ ಸಂಧಿ'ಯ ಪಾಠ ಮಾಡಲು ಬರ್ತಿದಾರೆ ತುಳು ನಿರ್ದೇಶಕ!

'ಸವರ್ಣದೀರ್ಘ ಸಂಧಿ' ಹೆಸರಿನಲ್ಲಿ, ಚಾಲಿ ಪೊಲೀಲು ಎಂಬ ತುಳು ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ವೀರೇಂದ್ರ ಶೆಟ್ಟಿ ಸ್ಯಾಂಡಲ್​ವುಡ್​ನಲ್ಲಿ ಅದೇ ಸಿನಿಮಾದ ನಿರ್ದೇಶನದ ಜೊತೆ ಆ್ಯಕ್ಟಿಂಗ್​ ಕೂಡ ಮಾಡಿದ್ದಾರೆ.

savarna-dergha-sandhi-movie-in-kannada

ಸ್ಯಾಂಡಲ್​ವುಡ್​ನಲ್ಲಿ ಕೆಲ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತವೊ, ಇಲ್ಲವೊ ಗೊತ್ತಿಲ್ಲ. ಆದ್ರೆ ಸಿನಿಮಾಗಳ ಟೈಟಲ್ ಮಾತ್ರ ಹೆಚ್ಚಿಗೆ ಸೌಂಡ್ ಮಾಡುತ್ತವೆ. ಇದೀಗ ಕನ್ನಡದ ವ್ಯಾಕರಣದಲ್ಲಿ ಬರುವ ಸಂಧಿಯ ಹೆಸರು ಸಿನಿಮಾ ಟೈಟಲ್ ಆಗಿದೆ.

'ಸವರ್ಣದೀರ್ಘ ಸಂಧಿ' ಹೆಸರಿನಲ್ಲಿ, ಚಾಲಿ ಪೊಲೀಲು ಎಂಬ ತುಳು ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ, ವೀರೇಂದ್ರ ಶೆಟ್ಟಿ ಈ ಸಿನಿಮಾವನ್ನ ನಿರ್ದೇಶನ ಮಾಡಿ ಆ್ಯಕ್ಟಿಂಗ್ ಸಹ ಮಾಡಿದ್ದಾರೆ.

ವೀರೇಂದ್ರ ಶೆಟ್ಟಿಯ 'ಸವರ್ಣದೀರ್ಘ ಸಂಧಿ'

ಅಚ್ಚರಿ ವಿಷ್ಯ ಅಂದ್ರೆ, ಮೂರು ವರ್ಷಗಳ ನಂತ್ರ ಮೆಲೊಡಿ ಹಾಡುಗಳ ಸಂಗೀತ ನಿರ್ದೇಶಕ, ಮನೋಮೂರ್ತಿ ಈ ಸಿನಿಮಾಕ್ಕೆ ನಿರ್ಮಾಣದ ಜೊತೆಗೆ, ಸಂಗೀತ ಕೂಡ ನೀಡಿದ್ದಾರೆ. ಇನ್ನು ತಾಯಿ ಪಾತ್ರದಲ್ಲಿ ಹೆಚ್ಚು ಗಮನ ಸೆಳೆದಿದ್ದ ಪದ್ಮಜಾ ರಾವ್ ಅಭಿನಯದ ಈ ಚಿತ್ರದಲ್ಲಿ, ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ ಸವರ್ಣದೀರ್ಘ ಸಂಧಿ ಚಿತ್ರತಂಡ, ತಮ್ಮ ಚಿತ್ರದ ಹೈಲೆಟ್ಸ್ ಅನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡ್ರು.

ಈ ಚಿತ್ರಕ್ಕೆ ವ್ಯಾಕರಣ ಸಂಧಿಯ ಟೈಟಲ್ ಇಟ್ಟಿದ್ದರೂ ಸಹ ಈ ಚಿತ್ರ ರೌಡಿಸಂ ಮತ್ತು ಕಾಮಿಡಿ ಸಿನಿಮಾ. ಇದರಲ್ಲಿ ಕಥಾ ನಾಯಕ ರೌಡಿ. ಈ ರೌಡಿಗೆ ವ್ಯಾಕರಣಕ್ಕೂ ಏನು ಸಂಬಂಧ ಅನ್ನೋದು ಚಿತ್ರದ ಸ್ಟೋರಿ ಲೈನ್.

ಇನ್ನು ಈ ಚಿತ್ರದ ನಾಯಕಿ ಕೃಷ್ಣಗೆ ಮೊದಲನೇ ಸಿನಿಮಾವಾಗಿದ್ದು, ಇದರಲ್ಲಿ ನಾಯಕಿ ಗಾಯಕಿಯಾಗಿರುತ್ತಾಳೆ. ಸಹ ನಟರಾಗಿ ರವಿ ಭಟ್, ರಂಜನ್ ದೇಶಪಾಂಡೆ, ಅವಿನಾಶ್ ರೈ ಹೀಗೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿದ್ದಾರೆ. ಮನೋಮೂರ್ತಿ ಈ ಚಿತ್ರಕ್ಕೆ ಏಳು ಹಾಡುಗಳನ್ನ ಕಂಪೋಸ್ ಮಾಡಿದ್ದಾರೆ. ವೀರೇಂದ್ರ ಶೆಟ್ಟಿ, ಮನೋಮೂರ್ತಿ, ಲುಷಿಗ್ಟಂನ್ ಥಾಮಸ್, ಹೇಮಂತ್ ಕುಮಾರ್ ಸೇರಿ ಈ‌ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

'ಸವರ್ಣದೀರ್ಘ ಸಂಧಿ' ಚಿತ್ರತಂಡ

ಆನೇಕಲ್, ಮೂಡಿಗೆರೆ, ‌ದೇವರಾಯನ ದುರ್ಗ, ಆನೇಕಲ್ ಜಿಗಣಿ, ಹೀಗೆ ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ತುಳು ಸಿನಿಮಾ ನಂತ್ರ ರವೀಂದ್ರ ಶೆಟ್ಟಿ 'ಸವರ್ಣದೀರ್ಘ ಸಂಧಿ' ಪಾಠ ಮಾಡೋದಕ್ಕೆ ಬರ್ತಿದಾರೆ. ಸದ್ಯ ಸೆನ್ಸಾರ್​ಗೆ ಹೋಗಿರುವ 'ಸವರ್ಣದೀರ್ಘ ಸಂಧಿ' ಸಿನಿಮಾವನ್ನು ಮುಂದಿನ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details