ಟೀಸರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಪರಿಮಳ ಲಾಡ್ಜ್. ನೀರ್ ದೋಸೆ ಚಿತ್ರದ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್, ಪರಿಮಳ ಲಾಡ್ಜ್ ಸಿನಿಮಾ ರಿಲೀಸ್ ಮುನ್ನವೇ, ಸತೀಶ್ ನೀನಾಸಂ ಜೊತೆ ಹೊಸ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ.
ಈಗಾಗಲೇ ವಿಜಯ್ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದಲ್ಲಿ ಸತೀಶ್ ನೀನಾಸಂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ಬಿಡುಗಡೆ ಮುನ್ನವೇ ವಿಜಯ್ ಪ್ರಸಾದ್ ಮತ್ತು ಸತೀಶ್ ನೀನಾಸಂ ಕಾಂಬಿನೇಷನ್, ಕ್ಯಾಚೀ ಟೈಟಲ್ ಹೊಂದಿರುವ ಪೆಟ್ರೋಮ್ಯಾಕ್ಸ್ ಎಂಬ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.
ಪೆಟ್ರೋಮ್ಯಾಕ್ಸ್ ಚಿತ್ರದ ವಿಶಿಷ್ಟವಾದ ಕಥೆ ಕೇಳಿ ಸತೀಶ್ ನೀನಾಸಂ ಇಷ್ಟ ಪಟ್ಟಿದ್ದಾರಂತೆ. ಈ ಚಿತ್ರವು ಜೀವನದ ಮೌಲ್ಯದ ಜೊತೆಗೆ ಸಂದೇಶವನ್ನು ಕೊಡುತ್ತೆ ಅನ್ನೋದು ಸತೀಶ್ ನೀನಾಸಂ ನಂಬಿಕೆ. ಮೊದಲಿನಿಂದಲೂ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಆತ್ಮೀಯ ಗೆಳೆಯರಂತೆ. ಈ ಸ್ನೇಹಕ್ಕಾಗಿ ಈಗ ವಿಜಯ್ ಪ್ರಸಾದ್ ಸತೀಶ್ ಸಿನಿಮಾಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರಂತೆ.