ಸ್ಯಾಂಡಲ್ ವುಡ್ನಲ್ಲಿ ಟೈಟಲ್ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ ಪೆಟ್ರೋಮ್ಯಾಕ್ಸ್. ಸತೀಶ್ ನೀನಾಸಂ ಜತೆ ಬ್ಯೂಟಿ ಕ್ವೀನ್ ಹರಿಪ್ರಿಯಾ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ಚಿತ್ರ.
ಪೆಟ್ರೋಮ್ಯಾಕ್ಸ್- ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿರುವ ಸತೀಶ್ ನೀನಾಸಂ ಸಿದ್ಲಿಂಗು, ನೀರ್ ದೋಸೆ ಚಿತ್ರಗಳ ಖ್ಯಾತಿಯ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ ಚಿತ್ರತಂಡ ಡಬ್ಬಿಂಗ್ ಮನೆಯಲ್ಲಿ ಬ್ಯುಸಿಯಾಗಿದೆ. ಸದ್ಯ ಸತೀಶ್ ನೀನಾಸಂ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಪೆಟ್ರೋಮ್ಯಾಕ್ಸ್ ಎಂದರೆ ಏನು? ಎಂಬುದರ ಬಗ್ಗೆ ಪಂಚಿಂಗ್ ಡೈಲಾಗ್ ಮೂಲಕ ಕಿಕ್ ನೀಡುತ್ತಿದ್ದಾರೆ.
ಸತೀಶ್ ಹಾಗು ಹರಿಪ್ರಿಯಾ ಜತೆಗೆ ಗೊಂಬೆಗಳ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ಕಾರುಣ್ಯಾ ರಾಮ್ ಮುಂತಾದವರು ಈ ಪೆಟ್ರೋಮ್ಯಾಕ್ಸ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಪೆಟ್ರೋಮ್ಯಾಕ್ಸ್ ಗೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ.
ಸತೀಶ್ ಪಿಕ್ಚರ್ ಹೌಸ್ನಲ್ಲಿ ಪೆಟ್ರೋಮ್ಯಾಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಕಳೆದ ನಾಲ್ಕೈದು ದಿನಗಳಿಂದ ಸತೀಶ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ನಲ್ಲಿ ಚಿತ್ರತಂಡವಿದೆ.