ತಮಿಳು ಚಿತ್ರವೊಂದರಲ್ಲಿ ನಟಿಸುವುದಾಗಿ ಸತೀಶ್ ನೀನಾಸಂ ಕಳೆದ ಮೂರು ವರ್ಷಗಳಿಂದ ಹೇಳುತ್ತಲೇ ಇದ್ದರು. ಈ ವಿಷಯವಾಗಿ 2-3 ಬಾರಿ ಅವರು ಚೆನ್ನೈಗೆ ಕೂಡಾ ಹೋಗಿ ಬಂದಿದ್ದರು. ಆದರೆ, ಅವರ ಅಭಿನಯದ ತಮಿಳು ಚಿತ್ರ ಮಾತ್ರ ಸೆಟ್ಟೇರಲೇ ಇಲ್ಲ. ಕನ್ನಡದಲ್ಲೇ ಸಾಕಷ್ಟು ಬ್ಯುಸಿ ಇರುವುದರಿಂದ ಇನ್ನು ಅವರು ತಮಿಳಿಗೆ ಹೋಗುವುದಿಲ್ಲ ಎಂದು ಎಲ್ಲರೂ ಅಂದುಕೊಳ್ಳುವಾಗಲೇ ಸತೀಶ್ ಈಗ ಕಾಲಿವುಡ್ಗೆ ಹೊರಡಲು ಸಿದ್ಧರಾಗಿದ್ದಾರೆ.
ಷೇಕ್ಸ್ಪಿಯರ್ ನಾಟಕ ಆಧರಿಸಿದ ಸಿನಿಮಾದಲ್ಲಿ ಸತೀಶ್ ನೀನಾಸಂ - Sathish Ninasam Tamil movie
ಸತೀಶ್ ನೀನಾಸಂ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ‘ಪಗೆವನುಕ್ಕು ಅರುಳ್ವಾಯ್’ ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ಕಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ನೀಡಿದ್ದಾರೆ. ಜನವರಿ 5 ರಿಂದ ಸತೀಶ್ ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.
ಇದನ್ನೂ ಓದಿ: ಬಹಳ ದಿನಗಳ ನಂತರ ಮತ್ತೊಮ್ಮೆ ಕಿರುತೆರೆಗೆ ವಾಪಸಾದ ವಿಜಯ್ ಸೂರ್ಯ
ಸದ್ಯಕ್ಕೆ ಸತೀಶ್ ಕನ್ನಡದಲ್ಲಿ 'ಪೆಟ್ರೋಮ್ಯಾಕ್ಸ್', 'ದಸರಾ' ಮತ್ತು 'ಮ್ಯಾಟ್ನಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ‘ಪಗೆವನುಕ್ಕು ಅರುಳ್ವಾಯ್’ ಎಂಬ ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಅನೀಸ್ ಎಂಬುವವರು ನಿರ್ದೇಶಿಸುತ್ತಿದ್ದು ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಜನವರಿ 5 ರಿಂದ ಸತೀಶ್ ಅಭಿನಯದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಸತೀಶ್ ಒಬ್ಬರೇ ಹೀರೋ ಅಲ್ಲ. ‘ನಾಡೋಡಿಗಳ್’ ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಶಶಿಕುಮಾರ್ ಕೂಡಾ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ವಿಲಿಯಂ ಷೇಕ್ಸ್ಪಿಯರ್ ಅವರ 'ಮ್ಯಾಕ್ಬೆತ್' ನಾಟಕವನ್ನು ಆಧರಿಸಿ ಈ ಚಿತ್ರದ ಕಥೆ ಮಾಡಲಾಗಿದ್ದು, ಚಿತ್ರದಲ್ಲಿ ಸತೀಶ್ ಮತ್ತು ಶಶಿಕುಮಾರ್ ಇಬ್ಬರೂ ಕೈದಿಗಳಾಗಿ ನಟಿಸುತ್ತಿದ್ದಾರೆ. ತಮಿಳು ಚಿತ್ರದಲ್ಲಿ ಸತೀಶ್ ಅಭಿನಯ ಹೇಗಿರಲಿದೆ ಎಂಬ ಕುತೂಹಲ ಕನ್ನಡ ಸಿನಿಪ್ರಿಯರಿಗೆ ಇದೆ.