ಕನ್ನಡ ಚಿತ್ರರಂಗದಲ್ಲಿ ಬಯೋಫಿಕ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಈ ಸಾಲಿಗೆ ಭಾರತದ ಗಾನ ಕೋಗಿಲೆ ಹಾಗು ರಾಜಕಾರಣಿ ಸರೋಜಿನಿ ನಾಯ್ಡು ಅವರ ಜೀವನ ಚರಿತ್ರೆ ಈಗ ಸಿನಿಮಾ ಆಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ, ಗುರು, ಬಾಡಿಗಾರ್ಡ್‌ನಂತಹ ಸಿನಿಮಾಗಳಿಗೆ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿನಯ್ ಚಂದ್ರ, ಸರೋಜಿನಿ ನಾಯ್ಡು ಅವರ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಸದ್ಯ ಸರೋಜಿನಿ ನಾಯ್ಡು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಈ ವಿಚಾರವನ್ನ ಹಂಚಿಕೊಳ್ಳಲು ನಿರ್ದೇಶಕ ವಿನಯ್ ಚಂದ್ರ, ಸರೋಜಿನಿ ನಾಯ್ಡು ಪಾತ್ರ ಮಾಡುತ್ತಿರುವ ಸೌತ್ ನ ಖ್ಯಾತಿ ನಟಿ ಶಾಂತಿಪ್ರಿಯಾ, ಸರೋಜಿನಿ ನಾಯ್ಡು ಬಾಲ್ಯದ ಪಾತ್ರ ಮಾಡುತ್ತಿರುವ ಸೋನಾಲ್ ಮಾಂತೆರೋ, ಕಥೆಗಾರ ಧೀರಜ್ ಮಿಶ್ರಾ, ನಿರ್ಮಾಪಕರಾದ ಹನಿ ಚೌಧರಿ ಮತ್ತು ಚರಣ್ ಸುವರ್ಣ, ಹೇಮಂತ್ ಗೌಡ ಈ ವೇಳೆ ಉಪಸ್ಥಿತರಿದ್ದರು.
ಸರೋಜಿನಿ ನಾಯ್ಡು ಬಾಲ್ಯದ ಪಾತ್ರ ಮಾಡುತ್ತಿರುವ ಸೋನಾಲ್ ಮಾಂತೆರೋ ಮಾತನಾಡಿ, ನನಗೆ ಬಯೋಫಿಕ್ ಸಿನಿಮಾ ಮಾಡುವ ಕನಸು ಇತ್ತು, ಈಗ ಈ ಸಿನಿಮಾ ಮೂಲಕ ಈಡೇರುತ್ತಿದೆ ಅಂದರು. ನಿರ್ದೇಶಕ ವಿನಯ್ ಚಂದ್ರ ಮಾತನಾಡಿ, ಇಂಡಿಯಾದ ಬಗ್ಗೆ ಗೊತ್ತಿರದ ಕಥೆಯನ್ನು ಹೇಳುತ್ತದೆ ಮತ್ತು ಚಿತ್ರ ಸರೋಜಿನಿ ನಾಯ್ಡು ಅವರ ಹಲವು ವೈಯಕ್ತಿಕ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.