ಮೈಸೂರು: ಖ್ಯಾತ ಬಾಲಿವುಡ್ ಗಾಯಕಿ ಮನಾಲಿ ಠಾಕೂರ್ ಹಿಂದಿ ಗಾಯನದ ರಸಮಂಜರಿ ಹಾಗೂ ಸರಿಗಮಪ ಖ್ಯಾತಿಯ ಹನುಮಂತು ಗಾಯನಕ್ಕೆ ಮೈಸೂರು ಯುವ ಸಮೂಹ ಕುಣಿದು ಕುಪ್ಪಳಿಸಿದೆ.
ಯುವ ದಸರಾ ವೇದಿಕೆಯ ಮೂರನೇ ದಿನ ಕಾಲಿಡಲು ಜಾಗವಿಲ್ಲದೆ ಸಂಪೂರ್ಣ ಯುವ ಸಮೂಹದಿಂದ ಇಡೀ ಕಾರ್ಯಕ್ರಮದ ಸ್ಥಳ ಆವೃತವಾಗಿತ್ತು. ಸರಿಗಮಪ ಖ್ಯಾತಿಯ ಹನುಮಂತ ಹಾಡಿದ ಚುಟು ಚುಟು ಅಂತೈತಿ ನನಗ ಚುಮು ಚುಮು ಆಗ್ತೈತಿ ಹಾಡಿಗೆ ಯುವಕ ಯುವತಿಯರು ಹುಚ್ಚೆದ್ದು ಕುಣಿದಾಡಿದರು. ಇನ್ನು ಬಾಲಿವುಡ್ ಗಾಯಕಿ ಮನಾಲಿ ಠಾಕೂರ್ ಚಮ್ ಚಮ್, ಧಮ್ ಮಾರೋ ಧಮ್, ಎಂದು ಯುವಕರನ್ನು ಕುಣಿಯುವ ಹಾಗೆ ಮಾಡಿದರು.