ಕರ್ನಾಟಕ

karnataka

ETV Bharat / sitara

ಕನ್ನಡಕ್ಕೂ ಮುನ್ನವೇ ಮಲಯಾಳಂನಲ್ಲಿ ತಯಾರಾಗ್ತಿದೆ 'ಶಕೀಲಾ'...ಟೀಸರ್ ಬಿಡುಗಡೆ - Latest updates about Shakeela movie

ಖ್ಯಾತ ನಟಿ ಶಕೀಲಾ ಜೀವನ ಚರಿತ್ರೆ ಆಧಾರಿತ 'ಶಕೀಲಾ ' ಟೀಸರ್ ಬಿಡುಗಡೆಯಾಗಿದೆ. ಮಲಯಾಳಂನಲ್ಲಿ ಸುಗೀಶ್ ನಿರ್ದೇಶನದಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದಲ್ಲಿ ಶಕೀಲಾ ಪಾತ್ರವನ್ನು ಸರಯೂ ನಿರ್ವಹಿಸಿದ್ದಾರೆ.

Sarayu starring Shakeela teaser out
ಶಕೀಲಾ

By

Published : Jun 30, 2020, 11:55 AM IST

ದಕ್ಷಿಣ ಭಾರತದ ನಟಿ ಶಕೀಲಾ ಅವರ ಬಯೋಪಿಕ್ ಚಿತ್ರವನ್ನು ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದರು. ಈ ಚಿತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ಶಕೀಲಾ ಪಾತ್ರ ನಿರ್ವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಮಲಯಾಳಂ ಭಾಷೆಯಲ್ಲಿ ಶಕೀಲಾ ಕುರಿತಾದ ಸಿನಿಮಾ ತಯಾರಾಗಿದ್ದು ಟೀಸರ್ ಕೂಡಾ ಬಿಡುಗಡೆಯಾಗಿದೆ.

ಮಲಯಾಳಂನ ಖ್ಯಾತ ನಟಿ ಸರಯೂ ಮೋಹನ್ ಈ ಚಿತ್ರದಲ್ಲಿ ಶಕೀಲಾ ಪಾತ್ರ ನಿರ್ವಹಿಸಿದ್ದಾರೆ. ಸುಗೀಶ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಂದ್ರಜಿತ್ ಲಂಕೇಶ್ ತಾವು ಮಾಡಬೇಕೆಂದಿದ್ದ 'ದಿ ಶಕೀಲಾ' ಚಿತ್ರಕ್ಕೆ ವಿದ್ಯಾ ಬಾಲನ್ ನಟನೆಯ ಡರ್ಟಿ ಸಿನಿಮಾ ಸ್ಪೂರ್ತಿ ಎಂದಿದ್ದರು. ಅಲ್ಲದೆ ದಿ ಶಕೀಲಾ ಇತರ ಭಾಷೆಗಳಲ್ಲೂ ಬಿಡುಗಡೆಯಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಈ ಸಿನಿಮಾಗೂ ಮುನ್ನವೇ ಇದೀಗ ಮಲಯಾಳಂನ ಸರಯೂ ಅಭಿನಯದ ಸಿನಿಮಾ ಬಿಡುಗಡೆಯಾಗಲು ರೆಡಿಯಾಗುತ್ತಿದೆ.

ಶಕೀಲಾ

ಸರಯೂ ಮೋಹನ್​ ಕಪ್ಪಲ್ ಮುತಾಲೈ, ಕನ್ಯಾಕುಮಾರಿ ಎಕ್ಸ್​​​​ಪ್ರೆಸ್​​​, ಸಹಸ್ರಮ್, ಜನಪ್ರಿಯ, ಹಸ್ಬೆಂಡ್ಸ್​​​​​​​​​​ ಇನ್ ಗೋವಾ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆಯಾಗಿ ಕನ್ನಡಕ್ಕೂ ಡಬ್ ಆಗಲಿದೆ ಎನ್ನಲಾಗುತ್ತಿದೆ. ಫನ್ ಡೇ ಕ್ಲಬ್ ಕತಾರ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಅಮಲ್ ಕೆ. ಜೋಬಿ ಅವರದ್ದು. ಚಿತ್ರಕ್ಕೆ ಶಿಜು. ಎಂ ಭಾಸ್ಕರ್ ಛಾಯಾಗ್ರಹಣ, ಮನು ರಮೇಶನ್ ಸಂಗೀತ, ಹಿಷಾಮ್ ಯೂಸುಫ್ ಸಂಕಲನ ಇದೆ.

'ಶಕೀಲಾ' ಪಾತ್ರದಲ್ಲಿ ಸರಯೂ

ABOUT THE AUTHOR

...view details