ಬೆಂಗಳೂರು: ನಿರ್ಮಾಪಕ ಟೇಶಿ ವೆಂಕಟೇಶ್ ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಪ್ರತಿಕ್ರಿಯಿಸಿದ್ದಾರೆ.
ನಿರ್ಮಾಪಕ ಟೇಶಿ ವೆಂಕಟೇಶ್ ಆರೋಪಕ್ಕೆ ಗೋವಿಂದ್ ಪ್ರತ್ಯುತ್ತರ - undefined
ನಾನು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಏನೇನು ಕೆಲಸ ಮಾಡಿದ್ದೇನೆ ಎಂಬುದರ ಲಿಸ್ಟ್ ಕೊಡುತ್ತೇನೆ. ಬೇಕಾದರೆ ವೆಂಕಟೇಶ ಅದನ್ನು ಚೆಕ್ ಮಾಡಿಕೊಳ್ಳಲಿ- ಸಾ.ರಾ ಗೋವಿಂದ್.
ಮೊನ್ನೆ ಮಾಧ್ಯಮಗೋಷ್ಠಿಯಲ್ಲಿ ಗೋವಿಂದು ಮೇಲೆ ಹರಿಹಾಯ್ದಿದ್ದ ವೆಂಕಟೇಶ್, ಸಾ.ರಾ ಗೋವಿಂದು ಹಿಟ್ಲರ್ನಂತೆ ವರ್ತಿಸುತ್ತಾರೆ. ಅವರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅವರ ಈ ಆರೋಪಗಳಿಗೆ ನಗರದಲ್ಲಿಂದು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ಗೋವಿಂದ್, ಟೇಶಿ ವೆಂಕಟೇಶ್ ಅವರು ಒಂದು ಬಾರಿ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನನ್ನ ಬಣದಿಂದ ಸ್ಪರ್ಧಿಸಿದ್ದನ್ನು ಮರೆತಿದ್ದಾರೆ. ಚುನಾವಣಾ ಸಮಯದಲ್ಲಿ ಈ ರೀತಿ ಮಾತಾಡುವುದು ಸಾಮಾನ್ಯ. ಅವರೂ ನನ್ನ ಸ್ನೇಹಿತರೆ. ಮುಂದಿನ ದಿನಗಳಲ್ಲಿ ಅವರು ಕೂಡ ಅಧ್ಯಕ್ಷರಾಗಬಹುದು. ಆದರೆ, ಈ ಬಾರಿ ನಿರ್ಮಾಪಕರ ವಲಯದಿಂದ ಕಾರ್ಯದರ್ಶಿ ಸ್ಥಾನಕ್ಕೆ ನಾನು ಸುರೇಶ್ ಅವರನ್ನು ಬೆಂಬಲಿಸಿದ್ದೇನೆ ಎಂದರು.
ಅಲ್ಲದೆ ಗೋವಿಂದ್ ಅವರ ಬಣ ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಿಲ್ಲ,ಕೇವಲ ಅಧಿಕಾರ ಅನುಭವಿಸಲು ಚುನಾವಣೆಗೆ ಸ್ಪರ್ಧಿಸಿದ್ದಾರೆ ಎನ್ನುವ ವೆಂಕಟೇಶ್ ಅರೋಪಕ್ಕೆ ತಿರುಗೇಟು ನೀಡಿದ ಗೋವಿಂದ್, ಗಾಂಧಿನಗರದಲ್ಲಿ ನನ್ನದೇ ಆಫೀಸ್ ಇದೆ. ಅಲ್ಲದೆ ನಾನು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ಏನೇನು ಕೆಲಸ ಮಾಡಿದ್ದೇನೆ ಎಂಬುದರ ಲಿಸ್ಟ್ ಕೊಡುತ್ತೇನೆ. ಬೇಕಾದರೆ ವೆಂಕಟೇಶ ಅದನ್ನು ಚೆಕ್ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.