ಕನ್ನಡದಲ್ಲಿ ಶಾನ್ವಿ ಶ್ರೀವಾತ್ಸವ್ ನಟಿಸಿದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗ ಅವರು ಉದಯ ಟಿವಿಯ ‘ನಂದಿನಿ’ ಧಾರವಾಹಿಯ 700ನೇ ಕಂತಿಗೆ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಿರುತೆರೆಗೆ ಬಂದ್ರು 'ಮಾಸ್ಟರ್ ಪೀಸ್' ಶಾನ್ವಿ - undefined
ಸಿನಿಮಾ ಕಲಾವಿದರುಗಳಿಗೆ ಹಾಗೂ ಕಿರುತೆರೆಗೆ ಅವಿನಾಭಾವ ಸಂಬಂಧ. ಒಂದು ರೀತಿಯಲ್ಲಿ ಊರಿಗೆ ಬಂದವಳು ನೀರಿಗೆ ಬರಲ್ವ ಎಂಬ ಮಾತು ಇದ್ದಂತೆ. ಯಾವುದೇ ನಟ ಅಥವಾ ನಟಿ ಆಗಲಿ ಎಂದಾದರೂ ಒಂದು ದಿನ ಕಿರು ತೆರೆಗೆ ಎಂಟ್ರಿ ಆಗುತ್ತಾರೆ. ಈಗಿನ ಸರದಿ ಜನಪ್ರಿಯ ನಟಿ ಶಾನ್ವಿ ಶ್ರೀವಾತ್ಸವ್ ಅವರದ್ದು.

ಅನೇಕ ಕುತೂಹಲ ಹಾಗೂ ತಿರುವುಗಳನ್ನು ಹೊಂದಿರುವ ಈ ಧಾರವಾಹಿಯಲ್ಲಿ ಜನನಿ ಹಾಗೂ ಡಾ.ರಾಮ್ ನಿಶ್ಚಿತಾರ್ಥ ಸಂದರ್ಭದ ಡಾನ್ಸ್ ಅಲ್ಲಿ ‘ಮಾಸ್ಟರ್ ಪೀಸ್’ ನಾಯಕಿ ಶಾನ್ವಿ ಆಗಮನ ಆಗಲಿದೆ. ಇವರ ಆಗಮನದಿಂದ ಕಥೆಯ ಓಟಕ್ಕೂ ಒಂದು ವಿಚಿತ್ರ ಟ್ವಿಸ್ಟ್ ಸಹ ಸಿಗುತ್ತದೆ.
ಇನ್ನು ಶಾನ್ವಿ 'ಚಂದ್ರಲೇಖ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಆಗಿ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ಒಂದು ಹಾಡಿನಲ್ಲಿ ತಮ್ಮದೇ ಸ್ಟೈಲ್ನಿಂದ ಕುಣಿದು ಧಾರಾವಾಹಿಯ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ. ನಂದಿನಿ ಧಾರಾವಾಹಿ ಸೋಮವಾರ ದಿಂದ ಶುಕ್ರವಾರ 8.30 ಕ್ಕೆ ಪ್ರಸಾರ ಆಗುತ್ತಿದೆ. ಶಾನ್ವಿ ಸದ್ಯಕ್ಕೆ ‘ಅವನೇ ಶ್ರೀಮನ್ ನಾರಾಯಣ, ರವಿಚಂದ್ರ ಹಾಗೂ ಗೀತಾ ಸಿನಿಮಾಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.