ಸ್ಯಾಂಡಲ್ವುಡ್ನಲ್ಲಿ 'ಗಣಪ', 'ಕರಿಯ-2' ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿರುವ ನಟ ಸಂತೋಷ್ ಬಾಲರಾಜ್. ಸದ್ಯ ಸಂತೋಷ್ 'ಬರ್ಕ್ಲಿ' ಚಿತ್ರದ ಶೂಟಿಂಗ್ ಮುಗಿಸಿದ್ದು, ಚಿತ್ರದ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದೆ.
ಬಹದ್ದೂರ್ ಚೇತನ್ ಅವರು ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಸುಮಧುರವಾಗಿ ಹಾಡಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತವಿದ್ದು, ಸಂತೋಷ್ ಜೋಡಿಯಾಗಿ ಸಿಮ್ರಾನ್ ನಾಟೇಕರ್ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಅಭಿನಯದ ಕಾಲಚಕ್ರ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿರುವ ಸುಮಂತ್ ಕ್ರಾಂತಿ ಈ ಚಿತ್ರಕ್ಕೂ ನಿರ್ದೇಶಕರಾಗಿದ್ದಾರೆ.
ಸಾಹಸ ಪ್ರಧಾನ ಹಾಗೂ ಉತ್ತಮ ಮನೋರಂಜನೆಯ ಈ ಚಿತ್ರಕ್ಕೆ ಸುಮಂತ್ ಕ್ರಾಂತಿ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಬಹುಭಾಷಾ ನಟ ಚರಣ್ರಾಜ್, ಖ್ಯಾತ ನಟಿ ಶೃತಿ, ಬಲ ರಾಜವಾಡಿ, ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗವಿದೆ.