ಕರ್ನಾಟಕ

karnataka

ETV Bharat / sitara

'ಯುವರತ್ನ' ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ನಿರ್ದೇಶಕ ಸಂತೋಷ್ ಆನಂದ್​​​ರಾಮ್​​​ - ಯುವರತ್ನ ಮಾಹಿತಿ ಹಂಚಿಕೊಂಡ ನಿರ್ದೇಶಕ

'ಯುವರತ್ನ' ಸಿನಿಮಾದಲ್ಲಿ ಪುನೀತ್ 'ರಗ್ಬಿ' ಆಟಗಾರನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಪುನೀತ್ ತೊಟ್ಟಿರುವ ಟೀ ಶರ್ಟ್ ಸಂಖ್ಯೆ 29. ಅದು ಪುನೀತ್ ರಾಜ್​ಕುಮಾರ್​ ಅವರ 29 ನೇ ಕನ್ನಡ ಸಿನಿಮಾ ಎಂದು ಕೂಡಾ ಅರ್ಥ.

ಪುನೀತ್, ಸಂತೋಷ್ ಆನಂದ್ ರಾಮ್

By

Published : Nov 8, 2019, 12:33 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ 'ಯುವರತ್ನ' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದು ಪುನೀತ್ ರಾಜ್​​ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್​ ಕಾಂಬಿನೇಶನ್​​ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ.

'ಯುವರತ್ನ' ಚಿತ್ರೀಕರಣ ಸೆಟ್​​ನಲ್ಲಿ ಪುನೀತ್

ಪ್ರಪಂಚದಲ್ಲಿ ಮೂರು ರೀತಿಯ ಜನರಿದ್ದಾರೆ. ರೂಲ್ಸ್ ಫಾಲೋ ಮಾಡುವವರು. ರೂಲ್ಸ್ ಬ್ರೇಕ್ ಮಾಡುವವರು ಹಾಗೂ ರೂಲ್ಸ್​ ಹುಟ್ಟುಹಾಕುವವರು. ಈ ಚಿತ್ರದಲ್ಲಿ ಪುನೀತ್ ಮೂರನೇ ವರ್ಗಕ್ಕೆ ಸೇರಿದವರು. ಇನ್ನು ಈ ಚಿತ್ರದಲ್ಲಿ ಪುನೀತ್ 'ರಗ್ಬಿ' ಆಟಗಾರನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಪುನೀತ್ ತೊಟ್ಟಿರುವ ಟೀ ಶರ್ಟ್ ಸಂಖ್ಯೆ 29. ಅದು ಪುನೀತ್ ರಾಜ್​ಕುಮಾರ್​ ಅವರ 29 ನೇ ಕನ್ನಡ ಸಿನಿಮಾ ಎಂದು ಕೂಡಾ ಅರ್ಥ. ಈ ಕ್ರೀಡೆಯ ಬಗ್ಗೆ ತಿಳಿದುಕೊಳ್ಳಲು ಪುನೀತ್ ಮೂರು ತಿಂಗಳ ತರಬೇತಿ ಪಡೆದಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಪುನೀತ್ ಮೂರು ವಿಭಿನ್ನ ಗೆಟಪ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ನಾಯಕಿ ಸಯೇಶ ಸೈಗಲ್​

ಈ ಚಿತ್ರದ ಮೂಲಕ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 'ಶಿಕ್ಷಣ ವ್ಯಾಪಾರ ಆಗಬಾರದು, ಎಲ್ಲರಿಗೂ ಲಭ್ಯ ಆಗಬೇಕು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಎಸ್​​​.ಎಸ್​​​​​. ತಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಕೂಡಾ ಈ ಸಿನಿಮಾ ಟೀಸರ್ ನೋಡಿ ‘ಬ್ರಿಲಿಯಂಟ್’ ಎಂದು ಉದ್ಘರಿಸಿದ್ದಾರೆ. ಕಿಚ್ಚ ಸುದೀಪ್ ಸಹ ಟೀಸರನ್ನು ಹೊಗಳಿದ್ದಾರೆ.

ನಿರ್ದೇಶಕ ಸಂತೋಷ್ ಆನಂದ್​ ರಾಮ್

ಮೈಸೂರು, ಬೆಂಗಳೂರು ಹಾಗೂ ಸುತ್ತಮುತ್ತ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸಯೇಶ ಸೈಗಲ್, ದಿಗಂತ್, ಧನಂಜಯ್, ರಂಗಾಯಣ ರಘು, ಸೋನು ಗೌಡ, ವಸಿಷ್ಠ ಸಿಂಹ, ರಾಧಿಕಾ ಶರತ್ ಕುಮಾರ್, ಪ್ರಕಾಶ್​​​​​​​​​​ ರಾಯ್, ಅರುಣ್ ಗೌಡ, ತ್ರಿವೇಣಿ, ಸಾಧು ಕೋಕಿಲ, ಸುಧಾರಾಣಿ, ಪ್ರಕಾಶ್​​​​ ಬೆಳವಾಡಿ, ರವಿಶಂಕರ್ ಗೌಡ, ಅಚ್ಯುತ್ ಕುಮಾರ್, ಗುರುದತ್, ಕುರಿ ಪ್ರತಾಪ್ ಹಾಗೂ ಇನ್ನಿತರರು ತಾರಾ ಬಳಗದಲ್ಲಿದ್ದಾರೆ.

ABOUT THE AUTHOR

...view details