ಕರ್ನಾಟಕ

karnataka

ETV Bharat / sitara

ಕಿರುತೆರೆ ನಟ ಸಂಜೀವ್ ಕುಲಕರ್ಣಿ ಸುಪುತ್ರ ಸೌರಭ್ ಕುಲಕರ್ಣಿ ಈಗ ಸಿನಿಮಾ‌ ನಿರ್ದೇಶಕ - sanjeev kulakarni's son saurav kulakarni

ನಿರ್ದೇಶಕ ಸೌರಭ್ ಕುಲಕರ್ಣಿ ರಂಗಭೂಮಿ, ಕಿರುತೆರೆಯಲ್ಲಿ ಹೆಸರು ಮಾಡಿರುವವರು. ಪಾಪ ಪಾಂಡು ಮೂಲಕ ಕನ್ನಡದ ಮನೆ ಮಾತಾಗಿರುವ ಸೌರಭ್‌ ಸಾಕಷ್ಟು ‌ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ..

cinema team
ಸಿನೆಮಾ ತಂಡ

By

Published : Sep 13, 2021, 9:43 PM IST

ಕನ್ನಡ ಚಿತ್ರರಂಗದ ಸಂಭ್ರಮ ಸೌರಭದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಅಂಜನ್ ಎ ಭಾರದ್ವಾಜ್

ಇವರ ನಿರ್ದೇಶನದ ಮೊದಲ ಚಿತ್ರ 'ಎಸ್​ಎಲ್​ವಿ ಸಿರಿ ಲಂಬೋದರ ವಿವಾಹ'ದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಮಂಜುನಾಥನ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು.

ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮುಹೂರ್ತದ ದಿನದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಮರ್ಷಿಯಲ್ ಎಂಟರ್ ಟ್ರೈನರ್​ ಚಿತ್ರವಾಗಿದ್ದು, ನಿರ್ದೇಶಕ ಸೌರಭ್ ಕುಲಕರ್ಣಿ ರಂಗಭೂಮಿ, ಕಿರುತೆರೆಯಲ್ಲಿ ಹೆಸರು ಮಾಡಿದವರು.

ಪಾಪ ಪಾಂಡು ಮೂಲಕ ಕನ್ನಡದ ಮನೆಮಾತಾಗಿರುವ ಸೌರಭ್‌ ಸಾಕಷ್ಟು ‌ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‌ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸೌರಭ ಕುಲಕರ್ಣಿ ಹಾಗೂ ನಮ್ಮನೆ ಪ್ರೊಡಕ್ಷನ್ಸ್ ತಂಡದವರದು.

ದಿಶಾ ರಮೇಶ್

ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಂಜನ್ ಎ ಭಾರದ್ವಾಜ್ ಈ ಚಿತ್ರದ ನಾಯಕ. ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿ.‌ ರಾಜೇಶ್ ನಟರಂಗ, ಸುಂದರ್ ವೀಣಾ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿ.ಡಿ.ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಸಿನೆಮಾ ತಂಡ

ಸಂಘರ್ಷ ಕುಮಾರ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ದೇವಿಪ್ರಕಾಶ್ ಕಲಾ ನಿರ್ದೇಶನ ಹಾಗೂ ಕಂಬಿ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಸ್ಯ್ರಾಟೊ ವೆಂಚ್ಯೂರ್ಸ್, ಪವಮಾನ ಕ್ರಿಯೇಷನ್ಸ್ ಹಾಗೂ ಧೂಪದ ದೃಶ್ಯ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಓದಿ:ನಿಖಿಲ್​ ಕುಮಾರಸ್ವಾಮಿ ಪತ್ನಿ ರೇವತಿ ಸೀಮಂತ ಕಾರ್ಯಕ್ರಮ; ದೊಡ್ಡಗೌಡರ ಮನೆಯಲ್ಲಿ ಸಂಭ್ರಮ

ABOUT THE AUTHOR

...view details