ಕರ್ನಾಟಕ

karnataka

ETV Bharat / sitara

ಕೆಜಿಎಫ್-2 ಕ್ಲೈಮ್ಯಾಕ್ಸ್​ ಚಿತ್ರೀಕರಣಕ್ಕಾಗಿ ವರ್ಕೌಟ್​ ಮಾಡುತ್ತಿರುವ ಅಧೀರ.. ಸಂಜು ಬಾಬಾಗೆ ಫ್ಯಾನ್ಸ್ ಫಿದಾ!! - Bollywood actor Sanjay Dutt Workout

60ರ ಇಳಿ ವಯಸ್ಸಿನಲ್ಲಿಯೂ ಆ್ಯಕ್ಟೀವ್ ಆಗಿರುವ ಸಂಜಯ್​ ದತ್​ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sanjay Dutt doing workout for KGF-2 climax shooting
ಕೆಜಿಎಫ್-2 ಕ್ಲೈಮ್ಯಾಕ್ಸ್​ ಚಿತ್ರೀಕರಕ್ಕಾಗಿ ವರ್ಕೌಟ್​ ಮಾಡುತ್ತಿರುವ ಅಧೀರ

By

Published : May 6, 2020, 10:42 AM IST

ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ಕೆಜಿಎಫ್ ಚಿತ್ರದ ಮುಂದುವರೆದ ಭಾಗ ಕೆಜಿಎಫ್-2 ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ.

ಕೆಜಿಎಫ್-2 ಕ್ಲೈಮ್ಯಾಕ್ಸ್​ ಚಿತ್ರೀಕರಕ್ಕಾಗಿ ವರ್ಕೌಟ್​ ಮಾಡುತ್ತಿರುವ ಅಧೀರ

ಹೀಗಾಗಿ ಲಾಕ್​ಡೌನ್​ ಸಮಯದಲ್ಲಿ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್​ ನಟ ಸಂಜಯ್ ದತ್, ಚಿತ್ರಕ್ಕಾಗಿ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 60ರ ಇಳಿ ವಯಸ್ಸಿನಲ್ಲಿಯೂ ಆ್ಯಕ್ಟೀವ್ ಆಗಿರುವ ಸಂಜಯ್​ ದತ್​ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಕಿಂಗ್​ಸ್ಟಾರ್​ ಯಶ್​

ಸದ್ಯ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಬಾಕಿಯಿದೆ. ಇದಕ್ಕಾಗಿ ನಿರ್ದೇಶಕ ಪ್ರಶಾಂತ್​ನೀಲ್​ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಫ್ಯಾನ್ ಇಂಡಿಯಾ ಸಿನಿಮಾವನ್ನ ಏಕ ಕಾಲದಲ್ಲಿ ವಿದೇಶದಲ್ಲೂ ಬಿಡುಗಡೆ ಮಾಡಲು ಯೋಜನೆ ಸಿದ್ದವಾಗುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಸಹ ಶುರು ಮಾಡಿದ್ದಾರೆ.

ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್​ ಜೊತೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಬಾಲಕೃಷ್ಣ, ಅನಂತ್​ನಾಗ್, ಮಾಳವಿಕ ಅವಿನಾಶ್, ಶರಣ್ ಶಕ್ತಿ, ಅಚ್ಯುತ್‌ಕುಮಾರ್, ವಸಿಷ್ಠ ಎನ್ ಸಿಂಹ, ಅರ್ಚನಾ ಜೋಯಿಸ್, ರಾಮಚಂದ್ರ ರಾಜು, ಬಿ ಸುರೇಶ, ಟಿ ಎಸ್ ನಾಗಾಭರಣ, ರಾವ್ ರಮೇಶ್ ಇತರರಿದ್ದಾರೆ.

ABOUT THE AUTHOR

...view details