ಕರ್ನಾಟಕ

karnataka

ETV Bharat / sitara

ಲೋಕಸಮರದಲ್ಲಿ ನನ್ನ ಸ್ಪರ್ಧೆ ಇಲ್ಲ... ಗಾಳಿ ಸುದ್ದಿಗೆ ತೆರೆ ಎಳೆದ  ಬಿ ಟೌನ್​ ನಟ

ಸಹೋದರಿ ಪ್ರಿಯಾ ದತ್​​ಗೆ ತಾವು ಬೆಂಬಲ ಸೂಚಿಸುತ್ತಿರುವುದಾಗಿ ಇದೇ ವೇಳೆ ಸಂಜಯ್ ದತ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ಸಂಜಯ್ ದತ್

By

Published : Mar 26, 2019, 5:11 PM IST

ನವದೆಹಲಿ:ಬಾಲಿವುಡ್​​ ನಟ ಸಂಜಯ್ ದತ್​ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆಬ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದಿರುವ ಬಿಟೌನ್ ನಟ ಎಲ್ಲ ಗಾಳಿ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ. ಜೊತೆಗೆ ತಮ್ಮ ಸಹೋದರಿ ಪ್ರಿಯಾ ದತ್​​ಗೆ ತಾವು ಬೆಂಬಲ ಸೂಚಿಸುತ್ತಿರುವುದಾಗಿ ಇದೇ ವೇಳೆ ಸಂಜಯ್ ದತ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ಪ್ರಿಯಾ ದತ್​ ಮುಂಬೈನ ವಾಯುವ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಸಂಜಯ್ ದತ್ ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿದ್ದು, ತಮ್ಮ ಸಹೋದರಿಗೆ ಎಲ್ಲರೂ ಮತ ನೀಡಿ, ಸುಭದ್ರ ದೇಶಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದಿದ್ದಾರೆ.

ABOUT THE AUTHOR

...view details