ಬೆಂಗಳೂರು: ಕನ್ನಡದ ಗ್ಲಾಮರಸ್ ನಟಿ ಸಂಜನಾ ಗಲ್ರಾನಿ ವಿವಾದದಲ್ಲಿ ಸಿಲುಕಿಕೊಂಡಿದ್ದು, ಬಾಲಿವುಡ್ ನಿರ್ಮಾಪಕಿಯೊಬ್ಬರ ಮೂಗಿಗೆ ವಿಸ್ಕಿ ಬಾಟಲಿಯಿಂದ ಹೊಡೆದ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರಿನ ಪಬ್ವೊಂದರಲ್ಲಿ ಒಂದೇ ಟೇಬಲ್ನಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಾತುಕತೆ ಅತಿರೇಕಕ್ಕೆ ಹೋಗಿ ಸಂಜನಾ ಅವರು ವಿಸ್ಕಿ ಬಾಟಲಿಯಿಂದ ನಿರ್ಮಾಪಕಿ ಮೂಗಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಕೂಡಲೇ ವಂದನಾ ಅವರು ಕಬ್ಬನ್ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಸಂಜನಾ ಅವರು ರಾಜಿ ಮೂಲಕ ಪ್ರಕರಣ ಇತ್ಯರ್ಥ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
'ಗಲಾಟೆ ವಿಡಿಯೋ ಇದೆಯಂತೆ'
ಇನ್ನು ಪಬ್ನಲ್ಲಿ ನಡೆದ ಗಲಾಟೆ ವಿಡಿಯೋ ಸಂಜನಾ ಅವರ ಬಳಿ ಇದ್ದು, ಅದನ್ನು ಯಾವುದೇ ಕಾರಣಕ್ಕೂ ವೈರಲ್ ಮಾಡಲ್ಲ. ನನಗೆ ಪಬ್ಲಿಸಿಟಿ ಬೇಡ ಎಂದು ಸಂಜನಾ ಹೇಳಿದ್ದಾರೆ. ಆದರೆ ಗಲಭೆ ನಂತರ ಕೆಲವು ವಿಡಿಯೋಗಳು ವೈರಲ್ ಆಗಿವೆ. 'ದೂರು ಬಂದಿರುವುದು ನಿಜ'
ಡಿಸಿಪಿ ಚೇತನ್ ಸಿಂಗ್ ರಾಥೋರ್ ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಪಬ್ವೊಂದರಲ್ಲಿ ಸಂಜನಾ ಗಲಾಟೆ ಮಾಡಿದ್ದಾರೆಂದು ದೂರು ಬಂದಿದೆ. ವಂದನಾ ಜೈನ್ ಎಂಬುವವರು ದೂರು ನೀಡಿದ್ದಾರೆ. ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಲಾಗಿದೆ. ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಘಟನೆ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ:
ಘಟನೆ ಬಗ್ಗೆ ಸಂಜನಾ ಗಲ್ರಾನಿ ಸ್ಪಷ್ಟನೆ ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ಗಲ್ರಾನಿ, ನನ್ನ ಸ್ನೇಹಿತೆ ಹಾಗೂ ನನ್ನ ನಡುವೆ ಬಾರ್ನಲ್ಲಿ ವಾದ ನಡೆದದ್ದು ನಿಜ. ಆದರೆ ಆಕೆ ಕೋಪದಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಾರ್ನಲ್ಲಿ ನಡೆದ ಘಟನೆಯನ್ನು ನನ್ನ ಫ್ರೆಂಡ್ ವಿಡಿಯೋ ಮಾಡಿದ್ದಾರೆ. ಆದರೆ ನಾನು ಅದನ್ನು ರಿವೀಲ್ ಮಾಡುವುದಿಲ್ಲ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಬಂದರೆ ಅದನ್ನು ರಿವೀಲ್ ಮಾಡುತ್ತೇನೆ. ನನಗೆ ಬಿಟ್ಟಿ ಪ್ರಚಾರ ಬೇಡ. ನಾನು ಮನೆಯಲ್ಲಿ ಆರಾಮವಾಗಿದ್ದೇನೆ. ನನ್ನ ಸ್ನೇಹಿತೆ ಕೂಡಾ ಅವರ ಮನೆಯಲ್ಲಿ ಅವರ ಪಾಡಿಗೆ ಇದ್ದಾರೆ. ಈ ಪ್ರಕರಣ ಇಲ್ಲಿಗೆ ಮುಗಿದಿದೆ. ಇದು ನಮ್ಮ ವೈಯಕ್ತಿಕ ವಿಚಾರ. ಇದಕ್ಕೆ ಬಣ್ಣ ಕಟ್ಟುವುದು ಬೇಡ, ನನ್ನ ಪಾಡಿಗೆ ಇರಲು ಬಿಡಿ' ಎಂದು ಸ್ಪಷ್ಟನೆ ನೀಡಿದ್ದಾರೆ.