ಕರ್ನಾಟಕ

karnataka

ETV Bharat / sitara

ಸಂಜನಾ-ವಂದನಾ ಗಲಾಟೆ ಪ್ರಕರಣ: ಘಟನೆಯ ಬಗ್ಗೆ ನಿರ್ಮಾಪಕಿ ಹೇಳಿದ್ದೇನು? - sandalwood actress sanjana

ಸ್ಯಾಂಡಲ್​ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ‌ ಮಧ್ಯೆ ಜಟಾಪಟಿ ನಡೆದಿದ್ದ ಪ್ರಕರಣದ ವಿಚಾರಣೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ವಂದನಾ ಜೈನ್ಪೊಲೀಸ್​ ಠಾಣೆಗೆ ಆಗಮಿಸಿ ಘಟನೆ ಕುರಿತು ವಿವರಣೆ ನೀಡಿದ್ದಾರೆ.

Vandana statement on quarel
ಸಂಜನಾ-ವಂದನಾ ಗಲಾಟೆ ಪ್ರಕರಣ

By

Published : Dec 30, 2019, 1:57 PM IST

ಬೆಂಗಳೂರು:ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್​ವೊಂದರಲ್ಲಿ ಸ್ಯಾಂಡಲ್​ವುಡ್ ನಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ‌ ಮಧ್ಯೆ ನಡೆದ ಜಟಾಪಟಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ‌ ನಡೆದ ಘಟನೆಯ ಕುರಿತು ವಿವರ ನೀಡಿ‌ದ್ದಾರೆ.

ಸಂಜನಾ-ವಂದನಾ ಗಲಾಟೆ ಪ್ರಕರಣ

ವಂದನಾ ಜೈನ್ ಹೇಳಿದ್ದೇನು? :

ಡಿಸೆಂಬರ್ 24ರಂದು ಕೋಝಿ ಬಾರ್​ಗೆ ನಾನು ತೆರಳಿದ್ದೆ. ಅಲ್ಲಿ ಸಂಜನಾ ತನ್ನ ಕೈಯಲಿದ್ದ ವಿಸ್ಕಿಯನ್ನ ನನ್ನ ಮುಖಕ್ಕೆ ಎರಚಿದ್ದಾಳೆ. ಸುಮಾರು 10 ನಿಮಿಷಗಳ ಕಾಲ ನನ್ನ ಕಣ್ಣು ಉರಿ ಬಂದಿದೆ. ಆದರೆ ನಾನು ಆಕೆಯ ಮೇಲೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಸಂಜನಾ ಕೂಡ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ರನ್ನು ಭೇಟಿಯಾಗಿದ್ದು, ಬಳಿಕ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿದ್ದಾರೆ. ಈ ಎಲ್ಲಾ ವಿವರಣೆಯ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್​ಸಿಆರ್ ದಾಖಲಿಸಿದ್ದಾರೆ.

ಸದ್ಯ ಪೊಲೀಸರು ವಂದನಾ ಹಾಗೂ ಸಂಜನಾ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಎಫ್ಐಆರ್ ದಾಖಲು ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇಬ್ಬರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅದರ ಮೇಲೆ ತನಿಖೆ ಮುಂದುವರಿಸಲಿದ್ದೇವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.

ABOUT THE AUTHOR

...view details