ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಆಚರಣೆಯ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ನ ನಟಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ವಿಶೇಷವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.
ಅನಾಥ ಮಕ್ಕಳ ಜೊತೆ ಕ್ರಿಸ್ಮಸ್ ಆಚರಿಸಿದ ನಟಿ ಸಂಜನಾ - sanjana Garlani Christmas celebration
ಸ್ಯಾಂಡಲ್ವುಡ್ನ ನಟಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ವಿಶೇಷವಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಸಂಜನಾ ಗರ್ಲಾನಿ 'ಮಡಿಲು' ಸಂಸ್ಥೆಯ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ವಿಶೇಷವಾಗಿ ಕ್ರಿಸ್ಮಸ್ ಆಚರಿಸಿದ್ದಾರೆ.

ಸಂಜನಾ ಗರ್ಲಾನಿ 'ಮಡಿಲು' ಸಂಸ್ಥೆಯ ಮಕ್ಕಳ ಜೊತೆ ಕೇಕ್ ಕಟ್ ಮಾಡಿ ವಿಶೇಷವಾಗಿ ಕ್ರಿಸ್ಮಸ್ ಆಚರಿಸಿದ್ದಾರೆ. ಇಂದಿರಾ ನಗರದ ಖಾಸಗಿ ಹೋಟೆಲ್ನಲ್ಲಿ ಸಂಸ್ಥೆಯ ಅನಾಥ ಮಕ್ಕಳಿಗೆ ಶೂ ಹಾಗೂ ಬಟ್ಟೆಗಳನ್ನು ಉಡುಗೊರೆ ನೀಡುವ ಮೂಲಕ ಖುಷಿ ಪಟ್ಟಿದ್ದಾರೆ. ಇನ್ನು ಈ ವಿಶೇಷ ದಿನದಂದೇ ಸಂಜನಾ ಗರ್ಲಾನಿ ಫೌಂಡೇಷನ್ಗೆ ಚಾಲನೆ ಕೊಟ್ಟು, ಈ ಫೌಂಡೇಷನ್ ಮೂಲಕ ಮಕ್ಕಳಿಗೆ ಉಡುಗೊರೆ ನೀಡಿದ್ದಾರೆ.
ಇನ್ನು ಈ ಸಂಭ್ರಮದಲ್ಲಿ ನಟ ಅನಿರುದ್ದ್ ಹಾಗೂ ಪತ್ನಿ ಕೀರ್ತಿ ಅನಿರುದ್ದ್ ಕೂಡ ಭಾಗವಹಿಸಿ ಮಕ್ಕಳ ಜೊತೆ ಕೇಕ್ ಕಟ್ ಮಾಡಿದರು. ಅಲ್ಲದೆ ನಟ ಅನಿರುದ್ದ್ ಸಂಜನಾ ಗರ್ಲಾನಿ ಫೌಂಡೇಷನ್ಗೆ ಚಾಲನೆ ಕೊಟ್ಟು, ಸಂಜನಾ ನನ್ನ ಸ್ನೇಹಿತೆ. ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.