ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ಸಂಜನಾ ಗಲ್ರಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸಂಜನಾ ಹಣದ ವ್ಯವಹಾರದ ಮಾಹಿತಿ ಕೋರಿ ಜಾರಿ ನಿರ್ದೇಶನಾಲಯ ಐಟಿಗೆ ಪತ್ರ ಬರೆದು ಆಕೆಯ ಆಸ್ತಿಯ ಸಂಪೂರ್ಣ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಸಂಜನಾ ಆಸ್ತಿ ವಿವರ ಕೋರಿ ಐಟಿಗೆ ಪತ್ರ ಬರೆದ ಇಡಿ...ನಟಿಗೆ ಮತ್ತಷ್ಟು ಸಂಕಷ್ಟ
ಸಂಜನಾ ಗಲ್ರಾನಿ ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಇಡಿ ಅಧಿಕಾರಿಗಳಿಗೆ ಸಂಜನಾ ಆಸ್ತಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ನೀಡದ ಕಾರಣ ಇಡಿ ಅಧಿಕಾರಿಗಳು ಐಟಿ ಮೂಲಕ ವಿವರ ಪಡೆಯಲು ಮುಂದಾಗಿದ್ದಾರೆ.
ಸಂಜನಾ ಗರ್ಲಾನಿ ಆರ್ಥಿಕ ವ್ಯವಹಾರದ ಮೇಲೆ ಇಡಿ ಹದ್ದಿನ ಕಣ್ಣಿಟ್ಟಿದ್ದು ನ್ಯಾಯಾಲಯದ ಅನುಮತಿ ಪಡೆದು ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ತೆರಳಿ ಆರ್ಥಿಕ ವಹಿವಾಟಿನ ಮಾಹಿತಿ ಪಡೆದಿದ್ದರು. ಆದರೆ ಇಡಿ ತನಿಕಾಧಿಕಾರಿಗಳಿಗೆ ಸಂಜನಾ ಸರಿಯಾಗಿ ಮಾಹಿತಿ ನೀಡದ ಕಾರಣ ಇದೀಗ ಇಡಿ ಅಧಿಕಾರಿಗಳು ತೆರಿಗೆ ಇಲಾಖೆಗೆ ಪತ್ರ ಬರೆದು 11 ಬ್ಯಾಂಕ್ಗಳಲ್ಲಿ ಅಕೌಂಟ್ ಹೊಂದಿರುವ ಸಂಜನಾ ಆಸ್ತಿ ಹಾಗೂ ಹಣದ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಸಿಸಿಬಿ ಪೊಲೀಸರು ಡ್ರಗ್ ಮಾಫಿಯಾ ಸಂಬಂಧ ಸಂಜಾನಾ ಗ್ರಲಾನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಂಜನಾ ಅಕೌಂಟ್ನಿಂದ ಇತರರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಸಂಜನಾ ಐಎಂಎ ಹಾಗೂ ಇತರೆಡೆ ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಬಯಲಾಗಿತ್ತು. ತನಿಖಾಧಿಕಾರಿಗಳ ಎದುರು ಐಎಂಎನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದೆ. ನಾನು ಕೋಟಿ ಆಸ್ತಿ ಮಾಡಿಲ್ಲ ಎಂದು ತಿಳಿಸಿದ್ದರು. ಒಟ್ಟಿನಲ್ಲಿ ತೆರಿಗೆ ಇಲಾಖೆ ನೀಡುವ ಮಾಹಿತಿ ಆಧಾರದ ಮೇಲೆ ಸಂಜನಾ ಮುಂದಿನ ಭವಿಷ್ಯ ನಿರ್ಧಾರವಾಗಿದೆ.