ಕರ್ನಾಟಕ

karnataka

ETV Bharat / sitara

ಹಿಂದೂ ದೇವರ ಬಗ್ಗೆ ಅಭಿಮಾನ ಹೊಂದಿದ್ದ ಸಂಜನಾ ಆಪ್ತ ಫಾಜಿಲ್..ವಿಡಿಯೋ ವೈರಲ್ - Fazil Ganesh pooja video

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ, ನಟಿ ಸಂಜನಾ ಗಲ್ರಾನಿ ಆಪ್ತ ಶಾಯಿಕ್ ಫಾಜಿಲ್ ಸದ್ಯಕ್ಕೆ ತಲೆ ಮರೆಸಿಕೊಂಡಿದ್ದು ಕಳೆದ ಗಣೇಶ ಹಬ್ಬದಂದು ಪಾಜಿಲ್ ತನ್ನ ಅಪಾರ್ಟ್​ಮೆಂಟ್​​ನಲ್ಲಿ ಗಣೇಶ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

Sanjana galrani friend Shaik fazil
ಶಾಯಿಕ್ ಫಾಜಿಲ್

By

Published : Sep 14, 2020, 12:03 PM IST

Updated : Sep 14, 2020, 12:40 PM IST

ಬೆಂಗಳೂರು:ಡ್ರಗ್ ಮಾಫಿಯಾ ಪ್ರಕರಣದ ಪ್ರಮುಖ ಆರೋಪಿ, ತಲೆಮರೆಸಿಕೊಂಡಿರುವ ಶಾಯಿಕ್ ಫಾಜಿಲ್​​​​​​​​​​ನ ಮತ್ತೊಂದು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಫಾಸಿಲ್​ ಹಿಂದೂ ದೇವತೆಗಳ ಬಗ್ಗೆ ಕೂಡಾ ಅಭಿಮಾನ ಹೊಂದಿದ್ದ ಎಂಬುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ.

ಗಣೇಶ ಪೂಜೆ ಮಾಡುತ್ತಿರುವ ಶಾಯಿಕ್ ಫಾಜಿಲ್

ಕಳೆದ ಗಣೇಶ ಹಬ್ಬದಂದು ಫಾಜಿಲ್ ತನ್ನ ಅಪಾರ್ಟ್​ಮೆಂಟ್​​​ನಲ್ಲಿ ಹಬ್ಬ ಆಚರಿಸಿದ್ದಾನೆ. ಮನೆಯಲ್ಲಿ ಗಣೇಶ ಕೂರಿಸಿ ಆಪ್ತರನ್ನು ಕರೆದು ಆರತಿ ಮಾಡಿ ಪೂಜೆ ನೆರವೇರಿಸಿದ್ದಾನೆ. ಅದಾದ ನಂತರ ಡ್ರಗ್ಸ್​ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಜಿಲ್ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಜಯನಗರದ ತನ್ನ ಅಪಾರ್ಟ್​ಮೆಂಟ್​​​​​​​​​​​​​​​​ನಲ್ಲಿ ಫಾಜಿಲ್ ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ತನ್ನ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ತಿಳಿದ ಫಾಜಿಲ್ ತಲೆಮರೆಸಿಕೊಂಡಿದ್ದು ಈತನ ಪತ್ತೆಗೆ ಸಿಸಿಬಿ ತಂಡ ಬಲೆ ಬೀಸಿದೆ. ಈ ಫಾಜಿಲ್ ನಟಿ ಸಂಜನಾ ಆಪ್ತನಾಗಿದ್ದು ಡ್ರಗ್ಸ್​​​​​​​​​​​​​​​​​ ಪ್ರಕರಣದಲ್ಲಿ ಈತ ಕೂಡಾ ಪ್ರಮುಖ ಆರೋಪಿಯಾಗಿದ್ದಾನೆ. ಒಂದು ವೇಳೆ ಈತ ದೊರೆತರೆ ಮತ್ತಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಾಯಿಕ್ ಫಾಜಿಲ್
Last Updated : Sep 14, 2020, 12:40 PM IST

ABOUT THE AUTHOR

...view details