ಕರ್ನಾಟಕ

karnataka

ETV Bharat / sitara

ಇಂದು ಸಂಜನಾ ಜಾಮೀನು ಅರ್ಜಿ ವಿಚಾರಣೆ..ನಟಿಗೆ ಟೆನ್ಶನ್​..ಟೆನ್ಶನ್​..!

ಇಂದು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಿಸಿಬಿ ಅಧಿಕಾರಿಗಳು ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ತಯಾರಿಯಲ್ಲಿದ್ದು ಮತ್ತೆ ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Sanjana  galrani
ಗಲ್ರಾನಿ

By

Published : Sep 18, 2020, 9:15 AM IST

Updated : Sep 18, 2020, 11:19 AM IST

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನ ಇಂದಿಗೆ ಮುಗಿಯಲಿದೆ. ವಿಶೇಷ ಎನ್​ಡಿಪಿಎಸ್ ಕೋರ್ಟ್ ನ್ಯಾಯಾಧೀಶರ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಹಾಜರುಪಡಿಸಲಾಗುವುದು.

ರಾಗಿಣಿ ದ್ವಿವೇದಿ

ಸಂಜನಾ ಪರ ವಕೀಲರು ಜಾಮಿನು ಅರ್ಜಿ ಸಲ್ಲಿಸಿದ್ದು ಇಂದು ಈ ಅರ್ಜಿ ವಿಚಾರಣೆ ‌ನಡೆಯಲಿದೆ. ಆದರೆ ಸಂಜನಾ ನ್ಯಾಯಾಂಗ ಬಂಧನ ಮತ್ತೆ ಮುಂದುವರೆಯಬಹುದು ಎನ್ನಲಾಗುತ್ತಿದೆ. ಸಿಸಿಬಿ ಪೊಲೀಸರು ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ತಯಾರಿಯಲ್ಲಿದ್ದಾರೆ. ಆದ್ದರಿಂದ ಸಂಜನಾ ಟೆನ್ಷನ್​​ನಲ್ಲಿದ್ದಾರೆ. ಮತ್ತೊಂದೆಡೆ ರಾಗಿಣಿ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ರಾಗಿಣಿ ಅರ್ಜಿ ವಿಚಾರಣೆ ನಾಳೆ ನಡೆಯಲಿದ್ದು ಸದ್ಯಕ್ಕೆ ಜೈಲು ಹಕ್ಕಿಗಳಿಬ್ಬರೂ ಒಂದೇ ಕೊಠಡಿಯಲ್ಲಿದ್ದು ಕಷ್ಟ-ಸುಖ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.

Last Updated : Sep 18, 2020, 11:19 AM IST

ABOUT THE AUTHOR

...view details