ಕರ್ನಾಟಕ

karnataka

ETV Bharat / sitara

'ವೀಕ್​​​​​​​​​​​​​​end'​​​ನಲ್ಲಿ ಸಂಜನಾ ಬುರ್ಲಿ ಶೈನಾಗುವ ವಿಶ್ವಾಸ.. - undefined

'ವೀಕ್​​​​​​​​​​​​​​end'​​​ ಸಿನಿಮಾ ನಾಯಕಿ ಸಂಜನಾ ಬುರ್ಲಿ ಇತ್ತೀಚೆಗೆ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಬೆಂಗಳೂರಿನ ಸಂಜನಾ ಬುರ್ಲಿ ಇಂಜಿನಿಯರಿಂಗ್ ಓದುತ್ತಿದ್ದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ವೀಕ್​​​​​​​​​​​​​​end'​​​ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ.

ಸಂಜನಾ ಬುರ್ಲಿ

By

Published : Apr 2, 2019, 8:10 PM IST

ಅನಂತ್​ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವೀಕ್​​​​​​​end'​​​ ಸಿನಿಮಾ ಮುಂದಿನ ತಿಂಗಳು ನಿಮ್ಮ ಮುಂದೆ ಬರಲು ಸಿದ್ಧವಾಗುತ್ತಿದೆ. 'ವರ್ಕ್ ಹಾರ್ಡ್ ಪಾರ್ಟಿ ಹಾರ್ಡ್' ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಶೃಂಗೇರಿ ಸುರೇಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಸಂಜನಾ ಬುರ್ಲಿ
ಸಂಜನಾ ಬುರ್ಲಿ

ಸಿನಿಮಾದಲ್ಲಿ ಬೆಂಗಳೂರಿನವರೇ ಆದ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಸಂಜನಾ ಹೊಸದಾಗಿ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ. ಸಂಜನಾ ಸದ್ಯಕ್ಕೆ ಅಂಬೇಡ್ಕರ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈಗಾಗಲೇ ಸಂಜನಾ ಬೇರೊಂದು ಸಿನಿಮಾದಲ್ಲಿ ನಟಿಸಿದ್ದಾರೆ. 'ವೀಕ್​​​​​​​​​​​​​​end'​​​​​​ ಅವರು ನಟಿಸಿರುವ ಎರಡನೇ ಸಿನಿಮಾ. ಆದರೂ ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವುದರಿಂದ ಸಂಜನಾಗೆ ಇದೇ ಮೊದಲ ಚಿತ್ರ ಎಂದರೆ ತಪ್ಪಾಗಲಾರದು.

ಸಂಜನಾ ಬುರ್ಲಿ
ಸಂಜನಾ ಬುರ್ಲಿ

'ವೀಕ್​​​​​​​​​​​​​​end'​​​ ಸಿನಿಮಾವನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್​ ಅಡಿ ಮಂಜುನಾಥ್.ಡಿ ನಿರ್ಮಿಸಿದ್ದಾರೆ. ಮಂಜುನಾಥ್ ಸಿನಿಮಾವನ್ನು ನಿರ್ಮಿಸಿರುವುದು ಮಾತ್ರವಲ್ಲ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೂಡಾ ನಟಿಸಿದ್ದಾರೆ. ಸಿನಿಮಾ ಮೇಲೆ ಭರವಸೆ ಹೆಚ್ಚಾಗಿದ್ದು ಬಿಡುಗಡೆ ನಂತರ ಪ್ರೇಕ್ಷಕ ಪ್ರಭುಗಳು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.

ಸಂಜನಾ ಬುರ್ಲಿ
ಸಂಜನಾ ಬುರ್ಲಿ

For All Latest Updates

TAGGED:

ABOUT THE AUTHOR

...view details