ಕರ್ನಾಟಕ

karnataka

ETV Bharat / sitara

ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಸಾಧ್ಯತೆ...ಭಯದಲ್ಲೇ ದಿನ ದೂಡುತ್ತಿರುವ ನಟಿಯರು - Sanjana in Parappana Agrahara jail

ರಾಗಿಣಿ ಹಾಗೂ ಸಂಜನಾ ಎನ್​​​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು ಇದೀಗ ಹೈಕೋರ್ಟ್​ನಲ್ಲಿ ಬೇಲ್​​​ಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜೈಲಿನಲ್ಲಿ ತಮಗೆ ಬೇಕಾದ ಅನುಕೂಲಗಳಿಲ್ಲದೆ ಇಬ್ಬರೂ ಚಡಪಡಿಸುತ್ತಿದ್ದಾರೆ.

Sandalwood drugs case
ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ

By

Published : Oct 1, 2020, 11:43 AM IST

ಬೆಂಗಳೂರು:ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿ ಬಂಧಿಯಾಗಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರೂ ಜೈಲಿನಲ್ಲಿ ಭಯದಿಂದಲೇ ಕಾಳ ಕಳೆಯುತ್ತಿದ್ದಾರೆ. ಒಂದೇ ಸೆಲ್​​​ನಲ್ಲಿ ಇರುವ ಇಬ್ಬರೂ ನಟಿಯರು ಸಿಟಿ ಸಿವಿಲ್​ ಕೊರ್ಟ್ ನ್ಯಾಯಾಲಯದಲ್ಲಿ ತಮ್ಮ ಬೇಲ್ ಅರ್ಜಿ ವಜಾ ಆದ ನಂತರವಂತೂ ಮತ್ತಷ್ಟು ಟೆನ್ಶನ್​​​​ನಲ್ಲಿದ್ದಾರೆ.

ಮನೆಯಲ್ಲಿ ರುಚಿಯಾದ ಊಟ ತಿಂದುಕೊಂಡು, ಮೆತ್ತನೆಯ ಹಾಸಿಗೆಯಲ್ಲಿ ಮಲಗುವ ಮೂಲಕ ಹೈಫೈ ಜೀವನ ನಡೆಸುತ್ತಿದ್ದ ಇಬ್ಬರೂ ಜೈಲು ಸೇರಿ ತಿಂಗಳಾಗುತ್ತಾ ಬಂದಿದೆ. ಜೈಲಿನಲ್ಲಿ ತಮಗೆ ಬೇಕಾದ ಯಾವುದೇ ಸೌಲಭ್ಯ ಇಲ್ಲದೆ ಚಡಪಡಿಸುತ್ತಿದ್ದಾರೆ. ಇದರ ನಡುವೆ ಇಂದು ಸಂಜನಾ ಹಾಗೂ ರಾಗಿಣಿ ಇಬ್ಬರೂ ಮತ್ತೆ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ‌ ಸಾಧ್ಯತೆ ಇದೆ. ಈಗಾಗಲೇ ಇವರು ಎನ್​​​ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಹೈಕೋರ್ಟ್​ನಲ್ಲಾದರೂ ನಮಗೆ ಜಾಮೀನು ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಇವರ ಭವಿಷ್ಯ ಹೈಕೋರ್ಟ್​ನಲ್ಲಿ ಏನಾಗಬಹುದು ಎಂಬ ಭಯ ಕುಟುಂಬದವರನ್ನು ಕಾಡುತ್ತಿದೆ. ಮತ್ತೊಂದೆಡೆ ನಟಿಯರ ಹಣದ ವ್ಯವಹಾರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಒಂದು ವೇಳೆ ಇವರಿಗೆ ಹೈಕೋರ್ಟ್​ನಲ್ಲಿ ಜಾಮೀನು ದೊರೆತರೂ ಇಡಿ ಸಂಕಷ್ಟ ತಪ್ಪಿದ್ದಲ್ಲ.

ABOUT THE AUTHOR

...view details