ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಇತ್ತೀಚೆಗೆ ಬಿಡುಗಡೆಯಾದ 'ಯುವರತ್ನ' ಸಿನಿಮಾಗೆ ದೊಡ್ಡ ಹೊಡೆದ ಬಿದ್ದಿದೆ. ಸರ್ಕಾರದ ನಿರ್ಧಾರದ ವಿರುದ್ಧ ಸ್ಯಾಂಡಲ್‌ವುಡ್ ಬಳಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಏಕಾಏಕಿ ನಿರ್ಧಾರದ ಮೂಲಕ ಒಂದು ಒಳ್ಳೆಯ ಕನ್ನಡ ಸಿನಿಮಾವನ್ನು ಕೊಲೆ ಮಾಡಲಾಗುತ್ತಿದೆ ಎಂದು ನಟ ಪುನೀತ್ ರಾಜ್‌ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. 'ಯುವರತ್ನ' ಚಿತ್ರ ತಂಡದ ಪರವಾಗಿ ಇಡೀ ಸ್ಯಾಂಡಲ್‌ವುಡ್ ಧ್ವನಿ ಎತ್ತಿದೆ. ಹೀಗಾಗಿ #Yuvarathanna #SaveCinema# Wewant 100PercentOccupancy ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಲಾಗುತ್ತಿದೆ.
ಈಗಾಗಲೇ ರಕ್ಷಿತ್ ಶೆಟ್ಟಿ, ಧನಂಜಯ, ನಟ ಪ್ರದೀಪ್, ನಿರ್ದೇಶಕ ಪ್ರೇಮ್, ಕಿಚ್ಚ ಸುದೀಪ್, ಶ್ರೀಮುರಳಿ ಹೀಗೆ ಸಾಕಷ್ಟು ಜನ ತಾರೆಯರು ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಶಿವರಾಜ್ ಕುಮಾರ್ ಕೂಡ ನಮ್ಮ ಉದ್ಯಮ ತೊಂದರೆಯಲ್ಲಿರುವುದರಿಂದ ಸರ್ಕಾರ ನಮಗೆ ಅಗತ್ಯ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ.