ಕರ್ನಾಟಕ

karnataka

ETV Bharat / sitara

ಪತ್ನಿ ಜೊತೆ ಕೈ ಹಿಡಿದು ಸುತ್ತಾಡುತ್ತಿರುವ ಫೋಟೋ ಹಂಚಿಕೊಂಡ ನಿಖಿಲ್ - Sandalwood Yuvaraja in Romantic mood

ತಮ್ಮ ಫಾರಂಹೌಸ್​​ನಲ್ಲಿ ರೇವತಿ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವೊಂದನ್ನು ಸ್ವತಃ ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sandalwood Yuvaraja in Romantic mood
ನಿಖಿಲ್

By

Published : May 28, 2020, 11:23 PM IST

ಲಾಕ್​ಡೌನ್ ಸಮಯದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಿಂಪಲ್ ಆಗಿ ಮದುವೆಯಾಗಿ ಗಮನ ಸೆಳೆದಿದ್ದರು. ನಂತರ ಪತ್ನಿ ರೇವತಿ ಜೊತೆ ಕೊರೊನಾದಿಂದ ಕಷ್ಟಪಡುತ್ತಿದ್ದ ರಾಮನಗರದ ಜನತೆಗೆ ದಿನಸಿ ಕಿಟ್​​​​ಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಿಖಿಲ್​​ ಅವರು ಪತ್ನಿ ಜೊತೆ ರೊಮ್ಯಾಂಟಿಕ್ ಮೂಡ್​​​ನಲ್ಲಿದ್ದಾರೆ.

ಪತ್ನಿ ಜೊತೆ ಫಾರಂಹೌಸ್​​ನಲ್ಲಿ ಸುತ್ತಾಡುತ್ತಿರುವ ನಿಖಿಲ್

ಬಿಡದಿ ಬಳಿಯ ತಮ್ಮ ತೋಟದ ಮನೆಯಲ್ಲಿ ನಿಖಿಲ್​, ತಮ್ಮ ಪತ್ನಿ ರೇವತಿ ಜೊತೆ ಸಂತೋಷವಾಗಿ ಓಡಾಡಿಕೊಂಡಿದ್ದಾರೆ. ರೇವತಿ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವೊಂದನ್ನು ಸ್ವತಃ ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕೊರೊನಾ ಹಾವಳಿಯಿಂದ ನಿಖಿಲ್ ಕುಮಾರಸ್ವಾಮಿ ಪತ್ನಿ‌ ರೇವತಿ ಜೊತೆ ಎಲ್ಲೂ ಹೊರಗಡೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಫಾರಂಹೌಸ್​​​ನಲ್ಲೇ ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ. ರೇವತಿ ಪಿಂಕ್ ಬಣ್ಣದ ಸೀರೆಯಲ್ಲಿ ಗಮನ ಸೆಳೆದರೆ, ನಿಖಿಲ್ ಕುಮಾರಸ್ವಾಮಿ ವೈಟ್ ಅಂಡ್ ವೈಟ್ ಕುರ್ತಾದಲ್ಲಿ ಯುವರಾಜನಂತೆ ಕಾಣುತ್ತಿದ್ದಾರೆ.

ತೋಟದ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಸಿನಿಮಾ ವಿಚಾರಕ್ಕೆ ಬರುವುದಾರೆ, ಅವರ ಕೈಯ್ಯಲ್ಲಿ 4 ಹೊಸ ಚಿತ್ರಗಳಿವೆ. ಲಾಕ್​​ಡೌನ್ ಮುಗಿದ ಬಳಿಕ ನಿಖಿಲ್ ಶೂಟಿಂಗ್​​​​​ನಲ್ಲಿ ಪಾಲ್ಗೊಳ್ಳಲಿದ್ದಾರೆ.

For All Latest Updates

TAGGED:

ABOUT THE AUTHOR

...view details