ಎಲ್ಲವೂ ಸರಿಯಾಗಿದ್ದಾರೆ ಏಪ್ರಿಲ್ ಫೂಲ್ ದಿವಸ ‘ಕಲಿವೀರ’ ಚಿತ್ರದ ನಿರ್ದೇಶಕ ಆವಿ ಒಂದು ಮೋಷನ್ ಪೋಸ್ಟರ್ನಿಂದ ಕನ್ನಡದ ಪ್ರಸಿದ್ದ ನಟರುಗಳನ್ನು ಬಳಸಿ ಪ್ರಚಾರ ಪಡೆಯಲು ಸಿದ್ದವಾಗಿದ್ದರು.
ಕಲಿವೀರ ನಾಯಕ ಏಕಲವ್ಯ ಹಾಗೂ ತಂಡ ಹೊಸಬರು. ಹಾಗಾಗಿ ಚಿತ್ರದ ಪ್ರಚಾರಕ್ಕಾಗಿ ಕನ್ನಡದ ಸ್ಟಾರ್ ನಾಯಕ ನಟರುಗಳ ಫೋಟೋಗಳನ್ನು, ಪೋಸ್ಟರ್‌ನಲ್ಲಿ ಬಳಸಿ ಬಿಡುಗಡೆ ಮಾಡಲು ಆವಿ ತಯಾರಾಗಿದ್ದರು.
ಶಿವರಾಜ್‌ಕುಮಾರ್,ಉಪೇಂದ್ರ, ಸುದೀಪ್, ದರ್ಶನ್, ಯಷ್, ರಕ್ಷಿತ್ ಶೆಟ್ಟಿ, ಪುನೀತ್‌ರಾಜಕುಮಾರ್, ಧ್ರುವ ಸರ್ಜಾ, ಶ್ರೀಮುರಳಿ, ದುನಿಯ ವಿಜಯ್ ಅವರ ಛಾಯಾಚಿತ್ರವನ್ನು ನಾಯಕನ ಮುಖದ ಜಾಗಕ್ಕೆ ಬಳಸಿ ಅದೇ ಪೋಸ್ಟರ್‌ನಲ್ಲಿ ಏಪ್ರಿಲ್ ಫೂಲ್ ಅಂತಲೂ ಹೇಳುತ್ತಾ ಬಿಡುಗಡೆ ಮಾಡುವುದು ಆವಿ ಅವರ ಯೋಜನೆ ಆಗಿತ್ತು.
ಸದ್ಯಕ್ಕೆ ಲಾಕ್‌ಡೌನ್ ಮುಗಿದ ನಂತರ ಅವರು ‘ಕಲಿವೀರ’ ಚಿತ್ರದ ಮೊದಲ ಆ್ಯಕ್ಷನ್ ಟೀಸರ್ ಗುರು ಯಲ್ಲಾಪುರ ಅವರು ಸಿದ್ದಪಡಿಸಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ. ಕಲಿವೀರ ರೀರೆಕಾರ್ಡಿಂಗ್ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಡಿ ಐ ಯೂನಿಫೈ ಮೀಡಿಯಾನಲ್ಲಿ ನಡೆಯುತ್ತಿದೆ.
ಏಕಲವ್ಯ ಚಿತ್ರದ ಕಥಾ ನಾಯಕ ನೂರಾರು ಯೋಗಾಸನಗಳಲ್ಲಿ ಪರಿಣಿತಿ ಪಡೆದು ಸಾಹಸ ಕಲೆಯಲ್ಲೂ ಪ್ರಸಿದ್ಧಿ ಪಡೆದವರು.
ಪಾವನ ಗೌಡ, ಚಿರಶ್ರೀ ಅಂಚನ್, ತಬಲಾ ನಾಣಿ, ಟಿ ಎಸ್ ನಾಗಾಭರಣ, ನೀನಾಸಂ ಅಶ್ವತ್ಥ್, ಮುನಿ, ಡ್ಯಾನಿ ಕುಟ್ಟಪ್ಪ, ಅನಿತಾ ಭಟ್, ಸೂರ್ಯನಾರಾಯಣ, ರಾಕ್ಲೈನ್ ಸುಧಾಕರ್, ಮೋಹನ್ ಜುನೇಜ ಹಾಗೂ ಇತರರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನ, ಎಸ್ ಹಾಲೇಶ್ ಛಾಯಾಗ್ರಹಣ ಮಾಡಿದ್ದಾರೆ.