ಮೈಸೂರು :ಕೊರೊನಾ ಎರಡನೇ ಅಲೆಯಿಂದ ಜಗತ್ತೇ ತತ್ತರಿಸಿದೆ. ಕೋವಿಡ್ ಮಣಿಸಲು ಎಲ್ಲರೂ ಹೋರಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೂಡ 'ನೀ ಬದಲಾಗು, ಮನಸ್ಸಿದ್ದರೆ ಮಾರ್ಗ ಮಾನವ' ಎಂದು ಕೊರೊನಾ ಅಲರ್ಟ್ ಸಾಂಗ್ ಹಾಡಿ ಜನರನ್ನ ಎಚ್ಚರಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಸ್ಯಾಂಡಲ್ವುಡ್ ತಾರೆಯರ ಕೋವಿಡ್ ಅಲರ್ಟ್ ಮೆಸೇಜ್.. ಡಿಬಾಸ್, ರಾಖಿ ಭಾಯ್, 'ಪವರ್'ಫುಲ್ ಡೈಲಾಂಗ್.. - ದರ್ಶನ್ ಕೊರೊನಾ ವಿಡಿಯೋ ಹಾಡು
'ಖಾಕಿ ಕಾನೂನು ಕಾಯುತ್ತಿದೆ, ಬಿಳಿ ಕೋಟು ನಮ್ಮ ಪ್ರಾಣ ಕಾಯ್ತಿದೆ, ಆಗಂತ ನೀವು ಮಾಸ್ಕ್ ಇಲ್ಲದೇ ಆಚೇ ಬಂದರೆ, ಕೊರೊನಾ ನಿಮ್ನ ಕಾಯ್ತಿದೆ' ಎಂದು 'ಡಿ ಬಾಸ್' ಡೈಲಾಂಗ್ ಟಚ್ ವಿಡಿಯೋದಲ್ಲಿದೆ. ಅಲ್ಲದೆ, ನಟ ಯಶ್ ಕೂಡ ಪಂಚಿಂಗ್ ಡೈಲಾಗ್ ಹೊಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಬಾಸ್ ರಾಖಿ ಭಾಯ್
ವಿಡಿಯೋದಲ್ಲಿ ರಾಕ್‌ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ದರ್ಶನ್, ಯಶ್, ಅಮರ್, ನಿರೂಪಕಿ ಅನುಶ್ರೀ ಸೇರಿದಂತೆ ನಟ-ನಟಿಯರು ರಾಜ್ಯದ ಜನರಿಗೆ ಕೋವಿಡ್ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
'ಖಾಕಿ ಕಾನೂನು ಕಾಯುತ್ತಿದೆ, ಬಿಳಿ ಕೋಟು ನಮ್ಮ ಪ್ರಾಣ ಕಾಯ್ತಿದೆ. ಹಾಗಂತಾ, ನೀವು ಮಾಸ್ಕ್ ಇಲ್ಲದೇ ಆಚೆ ಬಂದರೆ, ಕೊರೊನಾ ನಿಮ್ನ ಕಾಯ್ತಿದೆ' ಎಂದು 'ಡಿ ಬಾಸ್' ಡೈಲಾಂಗ್ ಟಚ್ ವಿಡಿಯೋದಲ್ಲಿದೆ. ಅಲ್ಲದೆ, ನಟ ಯಶ್ ಕೂಡ ಪಂಚಿಂಗ್ ಡೈಲಾಗ್ ಹೊಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.