ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ವರಮಹಾಲಕ್ಷ್ಮಿ ವ್ರತ. ಹಿಂದೂ ಸಂಪ್ರದಾಯದಲ್ಲಿ ಇಂದು ಪ್ರತಿಯೊಬ್ಬರೂ ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಕೊರೊನಾ ಭೀತಿ ಇರುವುದರಿಂದ ಈ ಬಾರಿ ಬಹಳಷ್ಟು ಕಡೆ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗಿದೆ.
ಸ್ಯಾಂಡಲ್ವುಡ್ ನಟ-ನಟಿಯರು ಕೂಡಾ ಎಂದಿನಂತೆ ಈ ಬಾರಿ ಹಬ್ಬ ಆಚರಿಸಿದ್ದಾರೆ. ಪ್ರತಿ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಬಹಳ ಅದ್ಧೂರಿಯಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಈ ಕೊರೊನಾದಿಂದಾಗಿ ಉಪೇಂದ್ರ ಮನೆಯಲ್ಲಿ ಲಕ್ಷ್ಮಿಪೂಜೆಯನ್ನು ಬಹಳ ಸರಳವಾಗಿ ಆಚರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಉಪೇಂದ್ರ, ನಮ್ಮ ಏರಿಯಾದಲ್ಲಿ ಒಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆ ನಾವು ಇರುವ ರಸ್ತೆಯನ್ನು ಸೀಲ್ಡೌನ್ ಮಾಡಲಾಗಿದೆ. ಪ್ರತಿ ವರ್ಷ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯ ಇತ್ತು. ಆದರೆ ಈ ವರ್ಷ ನಮ್ಮ ಮನೆಯವರಷ್ಟೇ ಸೇರಿ ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗಿದೆ. ಆದಷ್ಟು ಬೇಗ ಈ ಪ್ರಪಂಚ ಕೊರೊನಾ ಮುಕ್ತವಾಗಲಿ ಎಂದು ಪ್ರಿಯಾಂಕ, ದೇವರಲ್ಲಿ ಪ್ರಾರ್ಥಿಸಿದ್ದಾರೆ.