ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನ 'ಅರಗಿಣಿ'​ಗೆ ಹುಟ್ಟುಹಬ್ಬದ ಸಂಭ್ರಮ - Birthday latest news

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದ ಸುಧಾರಾಣಿ ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Sudharani
ಸುಧಾರಾಣಿ

By

Published : Aug 14, 2021, 9:27 AM IST

Updated : Aug 14, 2021, 8:38 PM IST

ಡಾ.ರಾಜ್​ಕುಮಾರ್​ ಅಭಿನಯದ ದೇವತಾ ಮನುಷ್ಯ ಚಿತ್ರದಿಂದ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸುಧಾರಾಣಿ 'ಆನಂದ್'​ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪರಿಚಯವಾದರು. ಇಂದಿಗೂ ಸಿನಿರಂಗದಲ್ಲಿ ಲವಲವಿಕೆಯಿಂದ ನಟಿಸುತ್ತಿರುವ ಸ್ಟಾರ್ ನಟಿ ಸುಧಾರಾಣಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಸುಧಾರಾಣಿ

ಸ್ಯಾಂಡಲ್​ವುಡ್​ನ 80-90 ದಶಕದ ಎಲ್ಲಾ ಬಿಗ್​ ಸ್ಟಾರ್​ಗಳೊಂದಿಗೆ ಸ್ಕ್ರೀನ್​ ಶೇರ್​ ಮಾಡಿದ ಸುಧಾರಾಣಿ ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಆಗಸ್ಟ್ 14,1971ರಲ್ಲಿ ಜನಿಸಿದ ಸುಧಾರಾಣಿ, ಕನ್ನಡ ಚಿತ್ರರಂಗವಲ್ಲದೇ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಹಿರಿ-ಕಿರುತೆರೆಯ ನಟಿಸಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.

ಮಗಳೊಂದಿಗೆ ನಟಿ ಸುಧಾರಾಣಿ

ಬಾಲ್ಯದಲ್ಲಿಯೇ ನೃತ್ಯ ಪ್ರವೀಣೆಯಾಗಿದ್ದ ಸುಧಾರಾಣಿ ಅವರು 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು. 'ಅನುರಾಗ ಸಂಗಮ'ದಲ್ಲಿ ಕಣ್ಣಿಲ್ಲದ ಹುಡುಗಿಯಾಗಿ, ‘ಮೈಸೂರು ಮಲ್ಲಿಗೆ'ಯಲ್ಲಿ ಪ್ರೇಮದ ಹುಡುಗಿಯಾಗಿ, ನಿನ್ನಂಥ ಅಪ್ಪ ಇಲ್ಲ ಎನ್ನುತ್ತಾ ರಾಜ್ ಜೊತೆ ಹೆಜ್ಜೆ ಹಾಕಿ ಕಲಾವಿದೆ.

ಆನಂದ್​ ಸಿನಿಮಾದಲ್ಲಿ ನಟಿ ಸುಧಾರಾಣಿ

ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸುಧಾರಾಣಿ ನಟಿಸಿದ್ದಾರೆ.

ಸುಧಾರಾಣಿ
Last Updated : Aug 14, 2021, 8:38 PM IST

ABOUT THE AUTHOR

...view details