ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನ ಈ ನಿರ್ಮಾಪಕ ಮುಟ್ಟಿದ್ದೆಲ್ಲಾ ಚಿನ್ನ...! - remake rights

ಸ್ಯಾಂಡಲ್​ವುಡ್​ ನಿರ್ಮಾಪಕ ಟಿ.ಆರ್​ ಚಂದ್ರಶೇಖರ್​ ನಿರ್ಮಾಣ ಮಾಡಿರುವ ಪ್ರತಿಯೊಂದು ಚಿತ್ರವೂ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿವೆ. ಇದೀಗ ಅವರ ಮೊತ್ತೊಂದು ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಆಗಸ್ಟ್​ 15 ರಂದು ತೆರೆಕಾಣಲಿದ್ದು, ಈಗಾಗಗಲೇ ಬೇರೆ ಭಾಷೆಗೆ ರಿಮೇಕ್ ರೈಟ್ಸ್ ಕುದುರಿಸಿದ್ದಾರೆ.

ಟಿ.ಆರ್ ಚಂದ್ರಶೇಖರ್

By

Published : Aug 13, 2019, 9:46 AM IST

ಸ್ಯಾಂಡಲ್​ವುಡ್​​ನಲ್ಲಿ​ ಸದ್ಯಕ್ಕೆ ನಿರ್ಮಾಪಕ ಟಿ ಆರ್​ ಚಂದ್ರಶೇಖರ್​ ಅವರು ಮುಟ್ಟಿದ್ದೆಲ್ಲ ಚಿನ್ನ ಅನ್ನುವಂತಾಗಿದೆ.

ಸಿನಿಮಾ ನಿರ್ಮಾಣಕ್ಕೂ ಬರುವುದಕ್ಕೂ ಮುಂಚೆ ಹಲವಾರು ಪದವಿಗಳನ್ನು ಪಡೆದಿರುವ ಮೈಸೂರಿನ ಕ್ರಿಸ್ಟಲ್ ಪಾರ್ಕ್ ಉದ್ಯಮಿ ಟಿ.ಆರ್ ಚಂದ್ರಶೇಖರ್ ಮೊದಲ ಸಿನಿಮಾ ‘ಚಮಕ್’ ಗೋಲ್ಡನ್ ಸ್ಟಾರ್ ಹಾಗೂ ರಶ್ಮಿಕ ಮಂದಣ್ಣ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು. ಎರಡನೇ ಸಿನಿಮಾ ‘ಅಯೋಗ್ಯ’ ನಿನಾಸಮ್​ ಸತೀಶ್ ಮತ್ತು ರಚಿತ ರಾಮ್ ಅಭಿನಯದ ಸಿನಿಮಾ 100 ದಿವಸ ಪ್ರದರ್ಶನ ಭಾಗ್ಯ ಪಡೆಯಿತು. ನಂತರ ಮೂರನೇ ಸಿನಿಮಾ ‘ಬೀರಬಲ್’ – ಶ್ರೀನಿವಾಸ್ ಎಂ ಜಿ ನಿರ್ದೇಶನದಲ್ಲಿ ಹಾಫ್​ ಸೆಂಚುರಿ ಭಾರಿಸಿತು. ಈಗ ನಾಲ್ಕನೇ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಬಿಡುಗಡೆಗೂ ಮುಂಚೆಯೇ ರಿಮೇಕ್ ರೈಟ್ಸ್ ವ್ಯಾಪಾರವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಕುದುರಿಸಿದ್ದಾರೆ.

ನಗೆ ನಟ ಸುಜಯ್ ಶಾಸ್ತಿ ಅಭಿನಯದ ರಾಜ್ ಬಿ ಶೆಟ್ಟಿ ಮತ್ತು ಕಾವ್ಯ ಗೌಡ ಅಭಿನಯದ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಈಗ ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗುವ ಸುದ್ದಿ ಬಂದಿದೆ. ಒಳ್ಳೆಯ ಬೆಲೆ ನೀಡಿ ಪ್ರತಿಷ್ಠಿತ ಸಂಸ್ಥೆ ಹಕ್ಕುಗಳನ್ನು ಖರೀದಿಸಿದೆ ಎನ್ನುತ್ತಾರೆ ಚಂದ್ರಶೇಖರ್. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಟ್ರೈಲರ್ ಈಗ ಬಹಳ ಸದ್ದು ಮಾಡಿದೆ ಮತ್ತು ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ.

ABOUT THE AUTHOR

...view details