ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ ಹೇಳಿ. ಎಲ್ಲರಿಗೂ ನೂರು ಪರ್ಸೆಂಟ್ ಅವಕಶ ಕೊಟ್ಟು ಚಿತ್ರಮಂದಿರಕ್ಕೆ ಮಾತ್ರ 50 ಪರ್ಸೆಟ್ ಅಕ್ಯುಪೆನ್ಸಿ ಕೊಟ್ಟಿರೋದ್ರಿಂದ ನಮಗೆ ಬಹಳ ಬೇಸರ ಆಗಿದೆ. ಬಹಳಷ್ಟು ಸಂಸಾರಗಳು ಇಂಡಸ್ಟ್ರಿಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ದಯವಿಟ್ಟು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಿಮ್ಮ ನಿರ್ಧಾರವನ್ನು ಬದಲಿಸಿ, ನೂರು ಪರ್ಸೆಂಟ್ ಅಕ್ಯುಪೆನ್ಸಿ ಕೊಡಿ ಎಂದು ನಟ ಶ್ರೀ ಮುರುಳಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ನಟ ಜಗ್ಗೇಶ್ ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಎಲ್ಲಾ ಕಡೆ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ಗೆ ಅವಕಾಶ ಕೊಟ್ಟಿದ್ದಾರೆ. ನೀವು ಕೂಡ ಕನ್ನಡ ಚಿತ್ರಮಂದಿರಗಳಲ್ಲಿ ನೂರು ಪರ್ಸೆಂಟ್ ಅಕ್ಯುಪೆನ್ಸಿಗೆ ಅವಕಾಶ ಕೊಡಿ. ಎಲ್ಲಾ ಕಡೆ ಅವೆರ್ನೆಸ್ ಬೆಳೆಯುತ್ತಿದೆ. ಜನರು ಎಚ್ಚರಿಕೆಯಿಂದ ಇದ್ದಾರೆ. ದಯಮಾಡಿ 100% ಅವಕಾಶ ಕೊಡಿ ಎಂದಿದ್ದಾರೆ.
ಇನ್ನು ನಟ, ನಿರ್ದೇಶಕ ಪ್ರೇಮ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೋಟೆಲ್, ಪಾರ್ಕ್, ಮಾರ್ಕೆಟ್ಗಳಲ್ಲಿ ಇಲ್ದೇ ಇರೋ ನಿಯಮಗಳು ಚಿತ್ರಮಂದಿರದಲ್ಲಿ ಯಾಕೇ? ಬೇರೇ ರಾಜ್ಯದ ಸರ್ಕಾರದೋರು ಸಪೋರ್ಟ್ ಮಾಡುವಷ್ಟು ನಮ್ಮ ರಾಜ್ಯ ಸರ್ಕಾರ ಯಾಕ್ ಮಾಡಲ್ಲ? ದಯವಿಟ್ಟು 100% occupancy ಕೊಟ್ಟು ಸಿನಿಮಾಗಳನ್ನು ಬದುಕಿಸಿ, ಸಿನಿಮಾರಂಗವನ್ನು ಬೆಳೆಸಿ ಎಂದಿದ್ದಾರೆ.
ಕನ್ನಡದ ಖ್ಯಾತ ನಟ ಪುನೀತ್ ಕೂಡ ಈ ಬಗ್ಗೆ ಅಭಿಪ್ರಯಾಯ ವ್ಯಕ್ತಪಡಿಸಿದ್ದು, ಖಾಸಗಿ ಕಾರ್ಯಕ್ರಮಗಳು, ಸಾರಿಗೆ, ಮಾರುಕಟ್ಟೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕಡೆ ಮುಕ್ತತೆ ಇರುವಾಗ ಚಿತ್ರಮಂದಿರಗಳಲ್ಲಿ ಈ ನಿಯಮ ಯಾಕೆ ಎಂದಿದ್ದಾರೆ.
ನಟ ಧನಂಜಯ್ ವಚನವನ್ನು ಉಲ್ಲೇಖ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ? ಊರೆಲ್ಲಾ ಜನಜಂಗುಳಿ ತುಂಬಿ ತುಳುಕುತಿರಲು Theater ಒಳಗೆ ಮಾತ್ರ ಕೊರೊನಾಗೆ ಅಂಜಿದೊಡೆಂತಯ್ಯ? ಎಂದು ಪ್ರಶ್ನೆ ಮಾಡಿದ್ದಾರೆ.