ಕರ್ನಾಟಕ

karnataka

ETV Bharat / sitara

ಸಲಗ ಚಿತ್ರದ 'ಸೂರಿ ಅಣ್ಣ' ಸಾಂಗ್ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ..! - ಟಗರು ಖ್ಯಾತಿಯ ಅಂತೋನಿ ದಾಸ್ ಕಂಠದಾನ

ಬಹು ನಿರೀಕ್ಷಿತ ಸಲಗ ಚಿತ್ರದ ಮಾಸ್ ಸಾಂಗ್ ಅನ್ನು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

KA_BNG_4_Salaga_Surianna_Song_Release_By_Shivanna_KA10012
ಸಲಗ ಚಿತ್ರದ 'ಸೂರಿ ಅಣ್ಣ' ಸಾಂಗ್ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ..!

By

Published : Jan 6, 2020, 10:51 AM IST

ಬೆಂಗಳೂರು:ಬಹು ನಿರೀಕ್ಷಿತ ಸಲಗ ಚಿತ್ರದ ಮಾಸ್ ಸಾಂಗ್ ಅನ್ನು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವಣ್ಣ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಚರಣರಾಜ್ ಹಾಗೂ ನವೀನ್ ಸಜ್ಜು ಕಂಪೋಸ್ ಮಾಡಿರುವ ಸಂಗೀತಕ್ಕೆ, ದುನಿಯಾ ವಿಜಯ್ ಹಾಗೂ ಕಿರಣ್ ಕುಮಾರ್ ಸಾಹಿತ್ಯ ಬರೆದಿದ್ದು, ಟಗರು ಖ್ಯಾತಿಯ ಅಂತೋನಿ ದಾಸ್ ಕಂಠದಾನ ಮಾಡಿದ್ದಾರೆ. ಟಗರು ಚಿತ್ರ ತಂಡವೇ ಸೇರಿ ಸಲಗ ಚಿತ್ರವನ್ನು ಮಾಡಿದ್ದು, ಚಿತ್ರದ ಮೇಕಿಂಗ್ ಅದ್ಬುತವಾಗಿ ಮೂಡಿ ಬಂದಿದೆ. ಅಲ್ಲದೇ ಸೂರಿ ಅಣ್ಣಾ ಸಾಂಗ್ ಚೆನ್ನಾಗಿ ಮೂಡಿ ಬಂದಿದ್ದು ಒಳ್ಳೆ ಸೌಂಡ್ ಮಾಡುತ್ತೇ. ವಿಜಿ ನಿರ್ದೇಶನಕ್ಕೆ ಖಂಡಿತ ಸಕ್ಸಸ್ ಸಿಗುತ್ತೆ, ಸಲಗ ಚಿತ್ರಕ್ಕೆ ನಾನು ಸದಾ ಬೆಂಬಲಕ್ಕೆ ನಿಂತಿರುತ್ತೇನೆ ಎಂದು ಶಿವಣ್ಣ ಶುಭಹಾರೈಸಿದರು.

ಸಲಗ ಚಿತ್ರದ 'ಸೂರಿ ಅಣ್ಣ' ಸಾಂಗ್ ಬಿಡುಗಡೆ ಮಾಡಿದ ಹ್ಯಾಟ್ರಿಕ್ ಹೀರೋ..!
ಇನ್ನು ಸಲಗ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಚಿತ್ರ ಬಿಡುಗಡೆಯಾಗುವವರೆಗೂ ನಾನು ಚಿತ್ರದ ಬಗ್ಗೆ ಏನು ಮಾತನಾಡುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದು ಹೇಳಿದ್ದರು. ಈಗ ಶಿವಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಭಿಮಾನಿಯೊಬ್ಬ ನನ್ನು ನಿರ್ಮಾಪಕನನ್ನಾಗಿ ಮಾಡಿದ್ದಾರೆ ಎಂದು ವಿಜಿ ಸಂತಸ ವ್ಯಕ್ತಪಡಿಸಿದರು.

ಶಿವಣ್ಣ ಹಾಗೂ ಗೀತಕ್ಕ ಅವರ ಆಶೀರ್ವಾದದಿಂದ ವೀನಸ್ ಫಿಲಂಸ್ ಹುಟ್ಟಿದ್ದು, ಅವರ ಮಾರ್ಗದರ್ಶನದಲ್ಲಿ ಟಗರು ಚಿತ್ರವನ್ನು ಮಾಡಿದ್ದೆ. ಈಗ ಸಲಗ ಚಿತ್ರವನ್ನು ಮಾಡಿದೆ ಎಂದು ನಿರ್ಮಾಪಕ ಕೆಪಿ ಶ್ರೀಕಾಂತ್ ಹೇಳಿದರು. ಇನ್ನು ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿರುವ ಡಾಲಿ ಧನಂಜಯ್, ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದು‌, ಟಗರು ಖ್ಯಾತಿಯ ಕಾಕ್ರೋಚ್ ಹಾಗೂ ಹೊಸ ಕಲಾವಿದರನ್ನು ನಿರ್ದೇಶಕ ದುನಿಯಾ ವಿಜಿ ಪರಿಚಯಿಸಿದ್ದಾರೆ. ಸದ್ಯ ಸಲಗ ಚಿತ್ರ ರಿಲೀಸ್​​​ಗೆ ರೆಡಿ ಇದ್ದು ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಕೆಪಿ ಶ್ರೀಕಾಂತ್ ಸಿದ್ಧತೆ ಮಾಡಿಕೊಂಡಿದ್ದಾರೆ.

ABOUT THE AUTHOR

...view details