ಸೆಲಬ್ರಿಟಿಗಳ ಕುಟುಂಬದಿಂದ ಮಕ್ಕಳು ಮೊಮ್ಮಕ್ಕಳು ಚಿತ್ರರಂಗಕ್ಕೆ ಬರುವುದು ಸಾಮಾನ್ಯ. ಕನ್ನಡದ ಇಬ್ಬರು ಖ್ಯಾತ ನಿರ್ಮಾಪಕರ ಮೊಮ್ಮಗಳು ಈಗ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಲು ಹೊರಟಿದ್ದಾಳೆ.
ಈ ಬಾಲ ಪ್ರತಿಭೆ ಸ್ಯಾಂಡಲ್ವುಡ್ನ ಇಬ್ಬರು ಖ್ಯಾತ ನಿರ್ಮಾಪಕರ ಮೊಮ್ಮಗಳು - Rockline grand daughter sarayu
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಹಾಗೂ ಮುನಿರತ್ನ ಮೊಮ್ಮಗಳು ಬೇಬಿ ಸರಯೂ ಹಾಡಿರುವ ಕೃಷ್ಣನ ಭಕ್ತಿಗೀತೆ ಯೂಟ್ಯೂಬ್ನಲ್ಲಿ ಲಭ್ಯವಿದ್ದು ಸರಯೂ ಗಾಯನಕ್ಕೆ ಸ್ಯಾಂಡಲ್ವುಡ್ ಸೆಲಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಹಾಗೂ ಮುನಿರತ್ನ ನಾಯ್ಡು ಮೊಮ್ಮಗಳು ಸರಯೂ ಈಗ ಪುಟ್ಟ ಸಂಗೀತಗಾರ್ತಿ. ಈ ಇಬ್ಬರೂ ನಿರ್ಮಾಪಕರು ಸಂಬಂಧಿಗಳು. 2011 ರಲ್ಲಿ ರಾಕ್ಲೈನ್ ಪುತ್ರ ಯತೀಶ್ ಅವರಿಗೆ ಮುನಿರತ್ನ ತಮ್ಮ ಮಗಳು ಸಿಂಧೂರಿಯನ್ನು ಕೊಟ್ಟು ಮದುವೆ ಮಾಡಿದರು. ಈ ದಂಪತಿಗೆ ಇಬ್ಬರು ಅವಳಿ ಮಕ್ಕಳು. ಗಂಡು ಮಗುವಿಗೆ ಶಿವತೇಜ್ ಹಾಗೂ ಹೆಣ್ಣುಮಗುವಿಗೆ ಸರಯೂ ಎಂದು ನಾಮಕರಣ ಮಾಡಲಾಯಿತು.
ಇದೀಗ ಸರಯೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ. ಕೃಷ್ಣ ಜನ್ಮಾಷ್ಠಮಿಯಂದು ಬೇಬಿ ಸರಯೂ ಹಾಡಿರುವ ಕೃಷ್ಣನ ಕುರಿತಾತ ಭಕ್ತಿಗೀತೆಯೊಂದು ಈಗ ಯೂಟ್ಯೂಬ್ನಲ್ಲಿ ಲಭ್ಯವಿದೆ.