ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ: ಇಂದು ಸಿಸಿಬಿ ಎದುರು ಐಂದ್ರಿತಾ-ದಿಗಂತ್​​ ಹಾಜರು! - Drug Mafia in Sandalwood

ಸ್ಯಾಂಡಲ್​ವುಡ್​ ಡ್ರಗ್ಸ್​ ಮಾಫಿಯಾ ವಿಚಾರವಾಗಿ ಇಂದು ಸಿಸಿಬಿ ಕಚೇರಿಗೆ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್​ ಹಾಜರಾಗಲಿದ್ದಾರೆ.

Sandalwood drug case
Sandalwood drug case

By

Published : Sep 16, 2020, 3:45 AM IST

ಬೆಂಗಳೂರು:ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿನ ವಿಚಾರಣೆ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸ್ಯಾಂಡಲ್​ವುಡ್​ ನಟ ದಿಗಂತ್​ ಹಾಗೂ ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ಜಾರಿಗೊಳಿಸಿದೆ. ಹೀಗಾಗಿ ಇಂದು ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಅವರು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಲಿದ್ದು, ವಿಚಾರಣೆಗೊಳಪಡಲಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಬಂಧನ ಮಾಡಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಡ್ರಗ್ಸ್ ಜಾಲ.. ವಿಚಾರಣೆಗೆ ಹಾಜರಾಗಲು ದಿಗಂತ್-ಐಂದ್ರಿತಾಗೆ ಸಿಸಿಬಿ ನೋಟಿಸ್

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಐಂದ್ರಿತಾ ರೇ, ವಿಚಾರಣೆಗಾಗಿ ಕಚೇರಿಗೆ ಹಾಜರಾಗುವಂತೆ ಮೊಬೈಲ್​ ಕರೆ ಮೂಲಕ ತಿಳಿಸಿದ್ದಾರೆ. ತಾವು ಇಂದು ಬೆಳಗ್ಗೆ ಸಿಸಿಬಿ ಕಚೇರಿಗೆ ತೆರಳುತ್ತಿದ್ದು, ಅವರು ಕೇಳುವ ಎಲ್ಲ ರೀತಿಯ ಪ್ರಶ್ನೆಗೆ ಉತ್ತರ ನೀಡುವ ಜತೆಗೆ ತನಿಖೆಗೆ ಸಹಕಾರ ನೀಡಲಿದ್ದೇವೆ ಎಂದಿದ್ದಾರೆ.

ಶ್ರೀಲಂಕಾದ‌‌ ಕೊಲಂಬೊದ ಕ್ಯಾಸಿನೋ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗುಳಿ‌ ಕೆನ್ನೆ ನಟ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೇ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಶೇಖ್​​ ಫಾಜಿಲ್​​ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟ-ನಟಿಯರನ್ನು ಹೈಫೈ ಪಾರ್ಟಿಗಳಿಗೆ‌ ಆಹ್ವಾನಿಸುತ್ತಿದ್ದ. ಇದರಂತೆ ನಟಿ ಸಂಜನಾ‌ ಗಲ್ರಾನಿ, ಐಂದ್ರಿತಾ ರೇ ಪಾರ್ಟಿಗೆ ಹೋಗಿ ಬಂದಿದ್ದರು.‌

ABOUT THE AUTHOR

...view details