ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾಟಲ್ ಕ್ಯಾಪ್ ಸಖತ್ ಟ್ರೆಂಡ್ ಕ್ರಿಯೆಟ್ ಮಾಡಿದೆ. ಚಾಲೆಂಜ್ ಸ್ವೀಕರಿಸಿದ ಹಲವರು ಗೆದ್ದಿದ್ದಾರೆ. ಬಾಲಿವುಡ್ ಕಿಲಾಡಿ ಅಕ್ಷಯ ಕುಮಾರ್ ಬಾಟಲ್ ಕ್ಯಾಪ್ ಚಾಲೆಂಜ್ ಅಕ್ಸೆಪ್ಟ್ ಮಾಡಿದ ಮೇಲೆ ಬಾಲಿವುಡ್ ಮಾತ್ರವಲ್ಲದೆ ಸ್ಯಾಂಡಲ್‍ವುಡ್ ನಲ್ಲೂ ಸದ್ದು ಮಾಡ್ತಿದೆ.
ಬಾಟಲ್ ಕ್ಯಾಪ್ ಜಾಲೆಂಜ್ ಗೆದ್ದು ಬೀಗಿದ ಚಂದನವನದ ಡಿಂಪಲ್ ಕ್ವೀನ್ - undefined
ಡಿಂಪಲ್ ಕ್ವೀನ್ ರಚ್ಚು ಬಾಟಲ್ ಕ್ಯಾಪ್ ಚಾಲೆಂಜ್ ಅಕ್ಸೆಪ್ಟ್ ಮಾಡಿ ಬಾಟಲಿ ಮುಚ್ಚಳವನ್ನು ಕಾಲಿಂದ ಒದ್ದು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
![ಬಾಟಲ್ ಕ್ಯಾಪ್ ಜಾಲೆಂಜ್ ಗೆದ್ದು ಬೀಗಿದ ಚಂದನವನದ ಡಿಂಪಲ್ ಕ್ವೀನ್](https://etvbharatimages.akamaized.net/etvbharat/prod-images/768-512-3760212-thumbnail-3x2-rachitha.jpg)
ಗೋಲ್ಡನ್ ಸ್ಟಾರ್ ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಬಾಟಲ್ ಕ್ಯಾಪ್ ಚಾಲೆಂಜ್ ಗೆದ್ದಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್‍ವುಡ್ ನಟಿ ರಚಿತಾ ರಾಮ್ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ಗೆದ್ದಿದ್ದಾರೆ.
ಡಿಂಪಲ್ ಕ್ವೀನ್ ರಚ್ಚು ಬಾಟಲ್ ಕ್ಯಾಪ್ ಚಾಲೆಂಜ್ ಅಕ್ಸೆಪ್ಟ್ ಮಾಡಿ ಬಾಟಲಿ ಮುಚ್ಚಳವನ್ನು ಕಾಲಿಂದ ಒದ್ದು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಚಾಲೆಂಜ್ ಕಂಪ್ಲೀಟ್ ಮಾಡಿದ ಖುಷಿಯಲ್ಲಿ ಸ್ಟೆಪ್ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ರಚ್ಚು ಅಭಿನಯದ ಐ ಲವ್ ಯೂ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು. ಸಂಜಯ್ ಅಲಿಯಾಸ್ ಸಂಜು ಚಿತ್ರಕ್ಕಾಗಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ವೇಳೆ ರಚ್ಚು ಬಾಟಲ್ ಕ್ಯಾಪ್ ಚಾಲೆಂಲ್ ಕಂಪ್ಲೀಟ್ ಮಾಡಿದ್ದಾರೆ.