ಕನ್ನಡ ಚಿತ್ರರಂಗದಲ್ಲಿ 38 ವರ್ಷಗಳನ್ನ ಪೂರೈಯಿಸಿರೋ ಶಿವರಾಜ್ ಕುಮಾರ್ ಸಿನಿಮಾ ರಂಗಕ್ಕೂ ಬರುವ ಮುನ್ನ ಮದ್ರಾಸ್‌ನಲ್ಲಿ ತಮ್ಮ ಶಿಕ್ಷಣದ ಜೊತೆಗೆ ನಟನೆ ಮೇಲೆ ಶಿಕ್ಷಣವನ್ನೂ ಪಡೆದಿದ್ದರು. ಅಂದಿನ ಸಿನಿಮಾ ಶಿಕ್ಷಣ ಪಡೆಯುತ್ತಿದ್ದ ವೇಳೆ ಶಿವಣ್ಣ ನಟಿಸಿದ ಅಣ್ಣಾವ್ರ ಒಂದು ಹಾಡು ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು, 1982ರಲ್ಲಿ ತೆರೆ ಕಂಡ ‘ಹಾಲು ಜೇನು’ ಸಿನಿಮಾದ ಹಾಲು ಜೇನು ಹಾಡನ್ನ ಶಿವರಾಜ್ ಕುಮಾರ್ ತಾವು ಮದ್ರಾಸ್‌ನಲ್ಲಿ ಸಿನಿಮಾ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲೇ ರೀ-ಕ್ರಿಯೇಟ್ ಮಾಡಿದ್ದರು. ಬರೀ ಆಡಿಯೋ ಸಾಂಗ್ ಅಲ್ಲ, ಆ್ಯಕ್ಟ್ ಮಾಡುವ ಮೂಲಕ ವಿಡಿಯೋವೊಂದನ್ನೂ ತಯಾರಿಸಿದ್ದರು.
ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿದೆ ಸೆಂಚುರಿ ಸ್ಟಾರ್ ಹಾಲು ಜೇನು ಹಾಡು ಸದ್ಯ ಶಿವರಾಜ್‌ಕುಮಾರ್ ಅಭಿನಯದ ಆ ಹಾಡಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿದೆ. ಡಾ. ರಾಜ್ ಕುಮಾರ್, ಮಾಧವಿ ಹಾಗೂ ರೂಪಾ ದೇವಿ ಅಭಿನಯದ ಹಾಲು ಜೇನು ಚಿತ್ರದ ಎವರ್ ಗ್ರೀನ್ ಹಾಡಿಗೆ ಶಿವರಾಜ್ ಕುಮಾರ್ ನಟನೆ ಚೆನ್ನಾಗಿಯೇ ಮೂಡಿ ಬಂದಿದೆ. ಮದ್ರಾಸ್‌ನ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯ ಟ್ರೈನಿಂಗ್ ಪಡೆದುಕೊಳ್ತಿದ್ದ ಶಿವಣ್ಣ ಹಾಲು ಜೇನಿನ ಕವರ್ ಸಾಂಗ್‌ನಲ್ಲಿ ಬಹಳ ಚಂದವಾಗಿಯೇ ನಟಸಿದ್ದಾರೆ.
ಔಟ್ ಡೋರ್ ಶೂಟ್ ಮಾಡಲಾದ ಈ ಹಾಡಿಗೆ ಮೋಹನ್ ಆ್ಯಕ್ಷನ್ ಕಟ್ ಹೇಳಿದ್ದು, ಸುಕುಮಾರ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಶಿವಣ್ಣನ ಜೊತೆ ಜೋಡಿಯಾಗಿ ಸ್ಮಿತಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸದ್ಯ ಸೆಂಚುರಿ ಸ್ಟಾರ್ ಈ ಹಾಲು ಜೇನು ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿದೆ.