ಡಾ. ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್, 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಚಂದನವನಕ್ಕೆ ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಬಿಡುಗಡೆಗೂ ಮುನ್ನವೇ ಸಿನಿಮಾ ಟಾಕ್ ಆಫ್ ದಿ ಟೌನ್ ಎನಿಸಿದೆ.
'ಯುವ ರಣಧೀರ ಕಂಠೀರವ' ಚಿತ್ರಕ್ಕೆ ಶುಭ ಕೋರಿದ ಸ್ಯಾಂಡಲ್ವುಡ್, ಟಾಲಿವುಡ್ ಸಿನಿ ಗಣ್ಯರು - Yuva rajkumar first movie
ಯುವ ರಾಜ್ಕುಮಾರ್ ಮೊದಲ ಚಿತ್ರ 'ಯುವ ರಣಧೀರ ಕಂಠೀರವ' ಚಿತ್ರದ ಟೀಸರ್ ನೋಡಿ ಟಾಲಿವುಡ್ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಪೇಂದ್ರ, ಪ್ರಶಾಂತ್ ನೀಲ್, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಹಾಗೂ ಇನ್ನಿತರರು ಕೂಡಾ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾ ಟೀಸರ್ ಕೂಡಾ ಗಮನ ಸೆಳೆದಿದೆ. ಟೀಸರ್ನಲ್ಲಿ ಯುವರಾಜ ಕುಮಾರ್ ಮಯೂರ ರೀತಿಯ ಲುಕ್, ಪಚಿಂಗ್ ಡೈಲಾಗ್ ಡೆಲಿವರಿ ಹಾಗೂ ಅದ್ಬುತ ಫೈಟಿಂಗ್ ಮೂಲಕ ಹಲ್ಚಲ್ ಎಬ್ಬಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲೇ ಈ ಚಿತ್ರದ ಮೇಲೆ ಕಣ್ಣಿದೆ. ಟಾಲಿವುಡ್ ಖ್ಯಾತ ನಿರ್ದೇಶಕರಾದ ವಿ.ವಿ. ವಿನಾಯಕ್, ಮೆಹರ್ ರಮೇಶ್, ಸುಕುಮಾರ್ ಹಾಗೂ ಇನ್ನಿತರರು ಯುವನ ಲುಕ್ ಹಾಗೂ ಫೈಟಿಂಗ್ ಸನ್ನಿವೇಶಗಳನ್ನು ನೋಡಿ ಫಿದಾ ಆಗಿದ್ದಾರೆ.
ಇತ್ತ ಸ್ಯಾಂಡಲ್ವುಡ್ ಗಣ್ಯರು ಯುವನ ಮೊದಲ ಚಿತ್ರಕ್ಕೆ ಶುಭ ಕೋರಿದ್ಧಾರೆ. ಸ್ಟಾರ್ ನಿರ್ದೇಶಕರಾದ ಪ್ರಶಾಂತ್ ನೀಲ್, ಉಪೇಂದ್ರ, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಹಾಗೂ ಇನ್ನಿತರರು ಯುವರಾಜ್ಕುಮಾರ್ ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಪ್ರಶಾಂತ್ ನೀಲ್ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಪುನೀತ್ ರುದ್ರನಾಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ.