ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಈ ಕೊರೊನಾ ಅಂಟಿಕೊಳ್ಳುತ್ತಿದೆ. ಈಗ ನಟಿ ಸಂಜನಾ ಗರ್ಲಾನಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ.
ಕೊರೊನಾ ಪಾಸಿಟಿವ್ ಬಗ್ಗೆ ದೃಢ ಪಡಿಸಿದ ನಟಿ ಸಂಜನಾ... ಚಂದನವನದ ತಾರೆಯರಲ್ಲೂ ಮೂಡಿದ ಆತಂಕ! - ಸ್ಯಾಂಡಲ್ವುಡ್ ನಟಿ ಸಂಜನಾ ಗರ್ಲಾನಿಗೆ ಕೊರೊನಾ ಸುದ್ದಿ,
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಕೆಲ ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ನಟಿ ಸಂಜನಾ ಗರ್ಲಾನಿಗೆ ಮಹಾಮಾರಿ ಕೊರೊನಾ ಸೋಂಕು ಅಂಟಿಕೊಂಡಿದ್ದು, ಈಗ ಸ್ಯಾಂಡಲ್ವುಡ್ ನಟ-ನಟಿಯರಲ್ಲಿ ಆತಂಕ ಮನೆ ಮಾಡಿದೆ.
ಕೊರೊನಾ ಪಾಸಿಟಿವ್ ಬಗ್ಗೆ ದೃಢ ಪಡಿಸಿದ ಸಂಜನಾ ಗರ್ಲಾನಿ
ಈಗಾಗಲೇ ನಟ ನಿಖಿಲ್ ಕುಮಾರ್, ನಿರ್ದೇಶಕ ಗುರುಪ್ರಸಾದ್, ನಟಿ ಮಿಲನಾ ನಾಗರಾಜ್ ಸೇರಿದಂತೆ ಸ್ಯಾಂಡಲ್ವುಡ್ನ ತಾರೆಯರಿಗೆ ಕೊರೊನಾ ಅಂಟಿಕೊಳ್ಳುತ್ತಿದೆ. ಈಗ ಡ್ರಗ್ಸ್ ಪ್ರಕರಣದಲ್ಲಿ ಜೈಲಿನಿಂದ ಹೊರಗಡೆ ಬಂದಿರುವ ಸಂಜನಾ ಗರ್ಲಾನಿಗೂ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಸ್ವತಃ ಸಂಜನಾ ಗರ್ಲಾನಿ ಕೊರೊನಾ ಪಾಸಿಟಿವ್ ಬಗ್ಗೆ ದೃಢ ಪಡಿಸಿದ್ದಾರೆ.
ಸದ್ಯ ಮನೆಯಲ್ಲೇ ಹೋಂ ಕ್ವಾಂರಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೀನಿ ಅಂತಾ ಸಂಜನಾ ಗರ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿ ಕೊಂಡಿದ್ದಾರೆ.