ಬಾಲನಟಿಯಾಗಿ, ನಾಯಕಿಯಾಗಿ, ಸೂಪರ್ ವುಮೆನ್ ಆಗಿ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ಮಾಲಾಶ್ರೀ ಈಗಲೂ ಯುವಜನತೆಗೆ ಅಚ್ಚುಮೆಚ್ಚು. ಸಿನಿ ಪ್ರಿಯರಿಗೆ ಆ್ಯಕ್ಷನ್ ಕ್ವೀನ್ ಎಂದೂ, ಕನಸಿನ ರಾಣಿ ಎಂದು ಚಿತ್ರರಂಗದಲ್ಲಿ ಮಿಂಚಿದ್ದ ಅವರು ಸುಮಾರು 25 ವರ್ಷಗಳ ನಂತರ ಮತ್ತೆ ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಅಲಿ ಜೊತೆಗೆ 'ಅಲಿತೋ ಸರದಾಗ' ಫನ್ನಿ ಶೋನಲ್ಲಿ ಕಾಣಿಸಿಕೊಂಡು, ಕೆಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದಾರೆ.
- ನೀವು ಗ್ಲಾಮರಸ್ ಹೀರೋಯಿನ್, ಆ್ಯಕ್ಷನ್ ಹೀರೋಯಿನ್ ಆಗಿ ಪರಿವರ್ತನೆ ಆಗಲು ಕಾರಣವೇನು?
ಮಾಲಾಶ್ರೀ : ನಂಜುಂಡಿ ಕಲ್ಯಾಣ ಸಿನಿಮಾದ ನಂತರ ನಿರ್ದೇಶಕರು ಮತ್ತು ನಿರ್ಮಾಪಕರು ನನಗೆ ವಿಭಿನ್ನ ಪಾತ್ರಗಳನ್ನು ನೀಡಲು ಪ್ರಾರಂಭಿಸಿದರು. ಸೋಮಶೇಖರ್ ಅವರು ಎಸ್ಪಿ ಭಾರ್ಗವಿ ಸಿನಿಮಾದಲ್ಲಿ ನನ್ನನ್ನು ಪ್ರಧಾನ ಪಾತ್ರದಲ್ಲಿಟ್ಟು ಸಿನಿಮಾ ತೆಗೆದರು. ಈ ಸಿನಿಮಾ ಸಿಲ್ವರ್ ಜ್ಯೂಬಿಲಿ ಕಂಡಿತ್ತು. ಮೊದಲಿಗೆ ಅದರಲ್ಲಿನ ಪೊಲೀಸ್ ಅಧಿಕಾರಿ ಪಾತ್ರದ ಬಗ್ಗೆ ಹೇಳಿದಾಗ ತುಂಬ ನಕ್ಕಿದ್ದೆ. ಆ ಚಿತ್ರದ ಯಶಸ್ಸಿನ ನಂತರ ನನಗೆ ಆ್ಯಕ್ಷನ್ ಇರುವ ಚಿತ್ರಗಳಲ್ಲೇ ಅವಕಾಶ ಸಿಕ್ಕಿತ್ತು. ದುರ್ಗಿ ಅತ್ಯಂತ ದೊಡ್ಡ ಹಿಟ್ ಚಿತ್ರ. ಈ ಚಿತ್ರವನ್ನು ಎನ್ಟಿಆರ್ ಅವರೊಂದಿಗೆ ಚಿತ್ರಗಳು ಬಂದವು. ದುರ್ಗಿ ದೊಡ್ಡ ಹಿಟ್.
- ಇಷ್ಟು ವರ್ಷಗಳ ಕಾಲ ತೆಲುಗು ಚಿತ್ರಗಳಿಂದ ದೂರ ಉಳಿಯಲು ಕಾರಣವೇನು?
ಮಾಲಾಶ್ರೀ :ತೆಲುಗಿನಲ್ಲಿ 'ಸಾಹಸವೀರಡು, ಸಾಗರಕನ್ಯ ಸಿನಿಮಾ' ಮಾಡಿದ ನಂತರ ನಾನು ಮದುವೆಯಾದೆ. ಮದುವೆಯಾದ ನಂತರ ನನ್ನ ಸಿನಿಮಾಗಳ ಟ್ರೆಂಡ್ ಬದಲಾಗಿತ್ತು. ಕನ್ನಡದಲ್ಲಿ ಎಲ್ಲಾ ಪವರ್ಫುಲ್ ಆ್ಯಕ್ಷನ್ ಸಿನಿಮಾಗಳನ್ನು ಮಾಡಬೇಕಾಗಿ ಬಂತು. ಆದ್ದರಿಂದ ನಾನು ತೆಲುಗಿಗೆ ಬರಲು ಸಾಧ್ಯವಾಗಲಿಲ್ಲ.
- ನಿಮ್ಮ ಮೊದಲ ಹೆಸರು ಶ್ರೀದುರ್ಗಾ, ನಿಮಗೆ ರಸಿಕಾ ಎಂದೂ ಕೂಡಾ ಹೆಸರಿಟ್ಟಿದ್ದರಂತೆ?
ಮಾಲಾಶ್ರೀ:ಹೌದು,ಮನೆಯವರು ನನಗೆ ಇಟ್ಟಿದ್ದ ಹೆಸರು ಶ್ರೀದುರ್ಗಾ ಎಂದು. ತಮಿಳಿನಲ್ಲಿ ಪಾಂಡ್ಯರಾಜನ್ ಅವರ ಜೊತೆಯಲ್ಲಿ ಮುಕ್ತಾ ಫಿಲಂಸ್ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ, ಮುಕ್ತಾ ಶ್ರೀನಿವಾಸ್ ಅವರು ನನಗೆ ರಸಿಕಾ ಎಂದು ಹೆಸರು ಬದಲಾವಣೆ ಮಾಡಿದ್ದರು. ಕನ್ನಡಕ್ಕೆ ಬಂದಾಗ ಪಾರ್ವತಮ್ಮ ರಾಜಕುಮಾರ್ ಅವರು ನನ್ನ ಹೆಸರನ್ನು ಮಾಲಾಶ್ರೀ ಎಂದು ಬದಲಾಯಿಸಿದರು. ಅಂದಿನಿಂದ ಮಾಲಾಶ್ರೀ ಹೆಸರನ್ನೇ ಮುಂದುವರೆಸಿದ್ದೇನೆ.
- ತೆಲುಗಿನಲ್ಲಿ ಪ್ರೇಮಕೈದಿ ಸಿನಿಮಾ ಹಿಟ್ ಆದ ನಂತರ ಗಿಫ್ಟ್ ಬಂದಿತ್ತಂತೆ..!
ಮಾಲಾಶ್ರೀ :ಹೌದು, ನನಗೆ ತೆಲುಗು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಹಿಟ್ ನೀಡಿದ ಚಿತ್ರ 'ಪ್ರೇಮಕೈದಿ'. ಈ ಚಿತ್ರದ ಚಿತ್ರೀಕರಣದ ವೇಳೆಯೇ ಸಿನಿಮಾ ಹಿಟ್ ಆದರೆ, ಭರ್ಜರಿ ಗಿಫ್ಟ್ ನೀಡುವುದಾಗಿ ನಿರ್ಮಾಪಕರಾದ ರಾಮಾನಾಯ್ಡು ಅವರು ಹೇಳಿದ್ದರು. ಚಿತ್ರ ಹಿಟ್ ಆದ ನಂತರ ನನಗೆ ಪ್ರೀಮಿಯರ್ 118 ಕಾರನ್ನು ಅವರು ಗಿಫ್ಟ್ ಕೊಟ್ಟಿದ್ದರು.
- ನೀವು ಹಗಲು ಶೂಟಿಂಗ್ ಮುಗಿಸಿ ರಾತ್ರಿ ಕೋಣೆಗೆ ಹೋಗಿ ಕಣ್ಣೀರು ಹಾಕಿದ್ದಿರಂತೆ?