ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​ವುಡ್ ತಾರೆಯರ ಮನೆಯಲ್ಲಿ ಮನೆ ಮಾಡಿದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ - ನಟ ಶರಣ್

ಕನ್ನಡ ಚಿತ್ರರಂಗದ ನಟ - ನಟಿಯರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

Sandalwood actress celebrated Varamahalakshmi Festival
ಸ್ಯಾಂಡಲ್​​ವುಡ್ ತಾರೆಯರ ಮನೆಯಲ್ಲಿ ಮನೆ ಮಾಡಿದ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

By

Published : Aug 20, 2021, 5:36 PM IST

ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿವಿಧ ಬಗೆಯ ಸಿಹಿ ತಿಂಡಿಗಳು, ಹೊಸ ಬಟ್ಟೆ ತೊಟ್ಟು, ಲಕ್ಷ್ಮಿ ವಿಗ್ರಹ ಕೂರಿಸಿ, ವಿಶೇಷ ಅಲಂಕಾರ ಮಾಡಿ ವಿಶೇಷ ಫೂಜೆ ಮಾಡಲಾಗುತ್ತಿದೆ. ಈ ಸಂಭ್ರಮ ಇದೀಗ ಕನ್ನಡ ಚಿತ್ರರಂಗದಲ್ಲೂ ಮನೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡುವ ಸ್ಟಾರ್ ಫ್ಯಾಮಿಲಿ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬ. ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ನಿವಾಸದಲ್ಲಿ ಪ್ರಿಯಾಂಕ-ಉಪೇಂದ್ರ ದಂಪತಿ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ನಟ ರವಿಚಂದ್ರನ್​ ಮನೆಯಲ್ಲಿ ಹಬ್ಬದ ಸಡಗರ

ಇನ್ನು ಸಂಸದೆ ಸುಮಲತಾ ಅಂಬರೀಷ್ ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿತ್ತು. ಜೆಪಿ ನಗರದ ನಿವಾಸದಲ್ಲಿ ಸುಮಲತಾ ಕುಟುಂಬದ ಜೊತೆ ಈ ಲಕ್ಷ್ಮಿಯನ್ನ ಆರಾಧಿಸಿದ್ದಾರೆ. ಆರೋಗ್ಯವೆಂಬ ಲಕ್ಷ್ಮಿ ನಿಮ್ಮ ಮನೆಯಲ್ಲಿ ತುಂಬಿರಲಿ...ನೆಮ್ಮದಿಯೆಂಬ ಧನಧಾನ್ಯ ಮನದಲ್ಲಿ ನೆಲೆಯಾಗಲಿ...ಪ್ರೀತಿಯೆಂಬ ಸಂಪತ್ತಿರಲಿ ಮನೆಮನಗಳ ತುಂಬಲಿ, ವರಮಹಾಲಕ್ಷ್ಮಿ ನಿಮಗೆ ಶಾಂತಿ ಸಂಪತ್ತು ಕರುಣಿಸಲಿ ಎಂದು ಸುಮಲತಾ ಹಾರೈಯಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

ಇನ್ನು ಸ್ಯಾಂಡಲ್​​ವುಡ್​​ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿರೋ ನಟಿ ಶ್ವೇತಾ ಶ್ರೀವಾತ್ಸವ್ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸ್ಪೆಷಲ್ ಆಗಿ ಆಚರಿಸಿದ್ದಾರೆ. ಶ್ವೇತಾ ಲಕ್ಷ್ಮಿ ಪೂಜೆಯನ್ನು ಮಾಡದೆ ಲಕ್ಷ್ಮಿ ಅವತಾರದಲ್ಲಿ ಮಗಳ ಜೊತೆ ಫೋಟೋ ಶೂಟ್ ಮಾಡಿಸುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

ನಟಿ ಶ್ವೇತಾ ಶ್ರೀವಾತ್ಸವ್ ಫೋಟೋಶೂಟ್​

ಸ್ಯಾಂಡಲ್​​ವುಡ್​​​ನಲ್ಲಿ ಪೈಸಾ ವಸೂಲ್ ಹೀರೋ ಅಂತಾ ಕರೆಯಿಸಿಕೊಂಡಿರುವ ನಟ ಶರಣ್ ಸದ್ಯ ಅವತಾರ ಪುರಷ ಹಾಗೂ ಗುರು ಶಿಷ್ಯರು ಸಿನಿಮಾದಲ್ಲಿ ಬ್ಯುಸಿಯಾಗಿರೋ ಶರಣ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶರಣ್ ಮಗಳು ಹಾಗೂ ಕುಟುಂಬದ ಜೊತೆ ಹಬ್ಬ ಆಚರಿಸಿದ್ದಾರೆ.

ನಟ ಶರಣ್​ ಮನೆಯಲ್ಲಿ ಹಬ್ಬದ ಸಂಭ್ರಮ

ಇನ್ನು ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಜೊತೆ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಪತ್ನಿ ರೇವತಿ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್ ಕುಮಾರಸ್ವಾಮಿ

ಸಿನಿಮಾ ಹಾಗೂ ಬಿಗ್ ಬಾಸ್ ಶೋ ಮೂಲಕ ಸ್ಟಾರ್ ಡಮ್ ಹೆಚ್ಚಿಸಿಕೊಂಡಿಕೊಂಡಿರುವ ಶುಭಾಪೂಂಜಾ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗೋಲ್ಡನ್ ಬಣ್ಣದ ಸೀರೆಯಲ್ಲಿ ಶುಭಾಪೂಂಜಾ ಫೋಟೋಶೂಟ್ ಮಾಡಿಸುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ.

ನಟಿ ಶುಭಾಪೂಂಜಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ABOUT THE AUTHOR

...view details