ದೇಶಾದ್ಯಂತ ಇಂದು 72ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಪ್ರತಿ ರಾಜ್ಯದಲ್ಲೂ, ಜಿಲ್ಲೆಯಲ್ಲೂ ಪ್ರಮುಖ ಗಣ್ಯರು ತಮ್ಮ ತಮ್ಮ ಸ್ಥಳಗಳಲ್ಲಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸ್ಯಾಂಡಲ್ವುಡ್ ನಟ ದರ್ಶನ್, ಸುದೀಪ್, ಪುನೀತ್ ಹಾಗೂ ಇತರ ಸ್ಯಾಂಡಲ್ವುಡ್ ನಟ-ನಟಿಯರು ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.
72ನೇ ಗಣರಾಜ್ಯೋತ್ಸವದ ಶುಭ ಕೋರಿದ ಸ್ಯಾಂಡಲ್ವುಡ್ ನಟರು - Challenging star Darshan
ನಟ ದರ್ಶನ್, ಸುದೀಪ್, ಪುನೀತ್ ರಾಜ್ಕುಮಾರ್ ಹಾಗೂ ಇನ್ನಿತರ ನಟರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ 72 ನೇ ಗಣರಾಜ್ಯೋತ್ಸವ ದಿನದ ಶುಭಾಶಯ ಕೋರಿದ್ದಾರೆ.
![72ನೇ ಗಣರಾಜ್ಯೋತ್ಸವದ ಶುಭ ಕೋರಿದ ಸ್ಯಾಂಡಲ್ವುಡ್ ನಟರು Sandalwood actors](https://etvbharatimages.akamaized.net/etvbharat/prod-images/768-512-10385378-thumbnail-3x2-sudeep.jpg)
ಇದನ್ನೂ ಓದಿ:'ದಿ ಗ್ರೇಟ್ ಇಂಡಿಯನ್ ಕಿಚನ್' ಪೈರಸಿ ಕಾಪಿ ವೀಕ್ಷಿಸಿದ ಜನರು ಹೇಳಿದ್ದೇನು...?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿ, "ರಾಯಣ್ಣ ಹುಟ್ಟಿದರೆ ಸ್ವಾತಂತ್ರೋತ್ಸವ, ಗಲ್ಲಿಗೇರಿದರೆ ಗಣರಾಜ್ಯೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಹುತಾತ್ಮ ದಿನದಂದು ಶತ ಶತ ನಮನಗಳು. ಸಮಸ್ತ ನಾಡಿನ ಜನತೆಗೆ 72 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು...Happy Republic DayFlag of India" ಎಂದು ಬರೆದುಕೊಂಡಿದ್ದಾರೆ. ರಾಷ್ಟ್ರಧ್ವಜದ ಮೋಷನ್ ಪೋಸ್ಟರ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, "ದೇಶದ ಸಂವಿಧಾನ ಜಾರಿಗೆ ಬಂದ ದಿನ ಇದು, ಸರ್ವರಿಗೂ 72ನೇ ಗಣರಾಜ್ಯೋತ್ಸವದ ಶುಭಾಶಯಗಳು". ಎಂದು ಬರೆದುಕೊಂಡಿದ್ದಾರೆ. ಕೇಸರಿ,ಬಿಳಿ, ಹಸಿರು ಬಣ್ಣಗಳಿರುವ ಧ್ವಜದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ "ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು" ಎಂದು ಪುನೀತ್ ರಾಜ್ಕುಮಾರ್ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.