ಕರ್ನಾಟಕ

karnataka

ETV Bharat / sitara

ಖಳನಾಯಕ‌ನಾಗಿದ್ದ ಜಿಮ್ ರವಿ.. ದೀಪಾವಳಿಗೆ 'ಪುರುಷೋತ್ತಮ'ನಾಗಿ ಮಿಂಚಿಂಗ್​ - ಸ್ಯಾಂಡಲ್​ವುಡ್ ಲೇಟೆಸ್ಟ್ ಸುದ್ದಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಅತಿ ಹೆಚ್ಚು ಶೂಟಿಂಗ್ 'ಪುರುಷೋತ್ತಮ' ಸುಮಾರು 60 ದಿನಗಳಲ್ಲಿ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದು, ದೀಪಾವಳಿಗೆ ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ.

actor gym ravi latest film news
ಖಳನಾಯಕ‌ನಾಗಿ ಮಿಂಚಿದ್ದ ಜಿಮ್ ರವಿ, ದೀಪಾವಳಿಗೆ 'ಪುರುಷೋತ್ತಮ'ನಾಗಲಿದ್ದಾರೆ!

By

Published : Jul 20, 2021, 5:46 PM IST

Updated : Jul 20, 2021, 7:20 PM IST

ಮೈಸೂರು:ಸಿನಿಮಾದಲ್ಲಿ ಖಳನಾಯಕನಾಗಿ ಮಿಂಚುತ್ತಿರುವ ಜಿಮ್ ರವಿ ತಮ್ಮ ಕಟ್ಟುಮಸ್ತಾದ ದೇಹದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಅನೇಕರಿಗೆ ಸ್ಫೂರ್ತಿಯಾಗಿ, ಈ ಸಿನಿಮಾವೊಂದರ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ.

ಸದ್ಯ ಎವಿ ನಿರ್ಮಾಣ ಸಂಸ್ಥೆಯ ರವಿ ಜಿಮ್ ಪ್ರೊಡಕ್ಷನ್​ನಲ್ಲಿ ಮೂಡಿ ಬಂದಿರುವ 'ಪುರುಷೋತ್ತಮ' ಚಿತ್ರದಲ್ಲಿ ರವಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚಿತ್ರೀಕರಣದ ವೇಳೆ ಮಾಧ್ಯಮಗೋಷ್ಟಿ ನಡೆಸಿದ ಚಿತ್ರತಂಡ 'ಪುರುಷೋತ್ತಮ' ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ನೀಡಿದೆ.

ಪುರುಷೋತ್ತಮ ಚಿತ್ರ ತಂಡದ ಮಾಧ್ಯಮಗೋಷ್ಟಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ 'ಪುರುಷೋತ್ತಮ', ಅತಿ ಹೆಚ್ಚು ಶೂಟಿಂಗ್ ಅಂದ್ರೆ ಸುಮಾರು 60 ದಿನಗಳಲ್ಲಿ ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದು, ದೀಪಾವಳಿಗೆ ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ.

ಅಮರನಾಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಚೊಚ್ಚಲಬಾರಿಗೆ ನಾಯಕನಾಗಿ ತೆರೆ ಮೇಲೆ ಬರಲು ಜಿಮ್ ರವಿ ಸಜ್ಜಾಗಿದ್ದು, ಅಪೂರ್ವ ಸಿನಿಮಾದ ನಾಯಕಿಯಾಗಿದ್ದಾರೆ.

ಇದನ್ನೂ ಓದಿ:ರಾಜ್ ಕುಂದ್ರಾಗೆ ಜುಲೈ 23ರವರೆಗೆ ನ್ಯಾಯಾಂಗ ಬಂಧನ; ಆರೋಪ ಸಾಬೀತಾದರೆ 7 ವರ್ಷ ಜೈಲೂಟ

ಪುರುಷೋತ್ತಮ ಚಿತ್ರಕ್ಕೆ ಮೈಸೂರಿನವರೇ ಆಗಿರುವ ವಿಜಯ್ ರಾಮೇಗೌಡ ಬಂಡವಾಳ ಹಾಕಿದ್ದಾರೆ. ಸಾಂಸಾರಿಕ ಜೀವನದ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಪುರುಷೋತ್ತಮ ಜನರ ಮನಸ್ಸನ್ನ ಗೆದ್ದೇ ಗೆಲ್ಲುತ್ತದೆ ಅನ್ನೋದು ಚಿತ್ರತಂಡದ ವಿಶ್ವಾಸವಾಗಿದೆ.

Last Updated : Jul 20, 2021, 7:20 PM IST

ABOUT THE AUTHOR

...view details