ಕರ್ನಾಟಕ

karnataka

ETV Bharat / sitara

ದರ್ಶನ್ ಮನವಿಗೆ ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ.. ರಾಜ್ಯದ ಜೂಗಳಿಗೆ ಹರಿದುಬಂತು ಹಣ - ದರ್ಶನ್​ ಅಭಿಮಾನಿಗಳು,

ಮೃಗಾಲಯಗಳಲ್ಲಿನ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್​ ದರ್ಶನ್ ಮನವಿಗೆ ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಎಲ್ಲಾ ಜೂಗಳಿಗೆ ಲಕ್ಷಗಟ್ಟಲೇ ಹಣ ಹರಿದುಬಂದಿದೆ.

Darshan fans help, Darshan fans help to state Zoos, Darshan fan, Sandalwood actor Darshan fan news, ದರ್ಶನ್​ ಅಭಿಮಾನಿಗಳ ಸಹಾಯ, ರಾಜ್ಯದ ಜೂಗಳಿಗೆ ದರ್ಶನ ಅಭಿಮಾನಿಗಳ ಸಹಾಯ, ದರ್ಶನ್​ ಅಭಿಮಾನಿಗಳು, ಸ್ಯಾಂಡಲ್​ವುಡ್​ ನಟ ದರ್ಶನ್​ ಅಭಿಮಾನಗಳು ಸುದ್ದಿ,
ದರ್ಶನ್ ಮನವಿಗೆ ಅಭಿಮಾನಿಗಳಿಂದ ಸಿಕ್ತು ಅಭೂತಪೂರ್ವ ಬೆಂಬಲ

By

Published : Jun 9, 2021, 2:42 PM IST

ಕೊರೊನಾ ಹೆಮ್ಮಾರಿಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಇದೆ ಎಫೆಕ್ಟ್ ಜನ ಸಾಮಾನ್ಯರು ಅಲ್ಲದೇ, ರಾಜ್ಯದಲ್ಲಿರುವ ಮೃಗಾಲಯದ ಪ್ರಾಣಿಗಳ ಮೇಲೆ ಆಗಿತ್ತು. ಹೀಗಾಗಿ ನಟ ದರ್ಶನ್ ಕರ್ನಾಟಕದಲ್ಲಿರುವ 9 ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ನೀಡಿದ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.

ದರ್ಶನ್ ಮನವಿಗೆ ಅಭಿಮಾನಿಗಳಿಂದ ಸಿಕ್ತು ಅಭೂತಪೂರ್ವ ಬೆಂಬಲ

ಅಭಿಮಾನಿಗಳು ರಾಜ್ಯದ ಜನತೆ ಸ್ಪಂದಿಸಿದ್ದು, ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರ್ತಾ ಇದ್ದಾರೆ. ಇದರಿಂದ ಜೂಗಳಿಗೆ ಭರಪೂರ ಹಣ ಹರಿದು ಬರುತ್ತಿದೆ. ನಾಲ್ಕೇ ದಿನದಲ್ಲಿ ಬರೋಬ್ಬರಿ 70 ಲಕ್ಷ ರೂ. ಹೆಚ್ಚು ಸಂಗ್ರಹಗೊಂಡಿದೆ.

ದರ್ಶನ್ ಮನವಿಗೆ ಅಭಿಮಾನಿಗಳಿಂದ ಸಿಕ್ತು ಅಭೂತಪೂರ್ವ ಬೆಂಬಲ

ನಾಲ್ಕು ದಿನಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಂದ ಪ್ರಾಣಿಗಳ ದತ್ತು ಸ್ವೀಕಾರ ಮಾಡಲಾಗಿದೆ. ರಾಜ್ಯದ ಜೂಗಳಿಗೆ 4 ದಿನಗಳಲ್ಲಿ ಹರಿದು ಬಂದ ಮೊತ್ತ ಬರೋಬ್ಬರಿ 70 ಲಕ್ಷ 33 ಸಾವಿರ ರೂಪಾಯಿ.ಇದೇ ಜೂನ್ 5ರಂದು ಲಾಕ್​ಡೌನ್​ನಿಂದ ಕರ್ನಾಟಕದ 9 ಜೂಗಳಲ್ಲೂ ಸಮಸ್ಯೆಗಳು ಉಂಟಾಗಿದ್ದು, ಪ್ರಾಣಿಗಳ ದತ್ತು ಪಡೆಯುವ ಮೂಲಕ ನೆರವಾಗಿ ಎಂದು ವಿಡಿಯೋ ಮೂಲಕ ದರ್ಶನ್ ಮನವಿ ಮಾಡಿದರು.

ಜೂನ್ 5ರಂದು 8.65 ಲಕ್ಷ, ಜೂನ್ 6 - 22.83 ಲಕ್ಷ, ಜೂನ್ 7 - 19.86 ಲಕ್ಷ, ಜೂನ್ 8 - 18.98 ಲಕ್ಷ ಸೇರಿದಂತೆ ಹೀಗೆ ನಾಲ್ಕು ದಿನಗಳಲ್ಲಿ ಒಟ್ಟು 70.33 ಲಕ್ಷ ರೂಪಾಯಿ ರಾಜ್ಯದ 9 ಜೂಗಳಿಗೆ ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ದರ್ಶನ್​ಗೆ ಧನ್ಯವಾದ ಹೇಳಿದ್ದಾರೆ.

ABOUT THE AUTHOR

...view details